ಜಿಲ್ಲೆ

ಪೋಕ್ಸೋ ಕಾಯ್ದೆ ಅರಿವು ಕಾರ್ಯಕ್ರಮ

ಚಿತ್ರದುರ್ಗ: ಪೋಕ್ಸೋ ಕಾಯ್ದೆ ಕುರಿತಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಚಿತ್ರದುರ್ಗದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈಚೆಗೆ ಯುವ ಜನರಿಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ‌್ಯದರ್ಶಿ ಎಂ.ವಿಜಯ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ವೈ.ತಿಪ್ಪೇಸ್ವಾಮಿ, ಪ್ರಧಾನ ಕಾರ‌್ಯದರ್ಶಿ ಆರ್.ಗಂಗಾಧರ, ಉಪಾಧ್ಯಕ್ಷ ಎಂ.ಅನಿಲ್‌ಕುಮಾರ್, ಎಸ್.ಜಿ.ವಿನಯ್‌ಕುಮಾರ್, ಪ್ರಾಂಶುಪಾಲ ಬಿ.ರಮೇಶ್, ಉಪನ್ಯಾಸಕರಾದ ಪುರುಷೋತ್ತಮ್, ಸೌಮ್ಯಾ, ನಾಜ್ನೀನ್, ಜಿ.ಆರ್.ಪ್ರದೀಪ್‌ಕುಮಾರ್ ಇದ್ದರು.