ಕಾರವಾರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಶಿರಸಿ ಸಜ್ಜುಗೊಂಡಿದೆ.
ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಸಜ್ಜು ಮಾಡಲಾಗಿದೆ. ಪೆಂಡಾಲ್ ಅಡಿ, 40 ಸಾವಿರಕ್ಕೂ ಅಧಿಕ ಕೂರ್ಚಿ ಅಳವಡಿಸಲಾಗಿದ್ದು, 30 ಸಾವಿರ ಕುರ್ಚಿಗಳು ಈಗಾಗಲೇ ಭರ್ತಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ 12.50 ಕ್ಕೆ ಬೆಳಗಾವಿಯಿಂದ ಹೆಲಿಕಾಪ್ಟರ್ ಮೂಲಕ ಆಗಮಿಸುವರು.
1 ತಾಸು ಭಾಷಣ ಮಾಡಲಿದ್ದಾರೆ.
ಬಿಗಿ ಭದ್ರತೆ:
ಮಾರಿಕಾಂಬಾ ಕ್ರೀಡಾಂಗಣದ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ವಿಐಪಿಗಳಿಗೆ ಬೇರೆಯವರಿಗಾಗಿ ಪ್ರತ್ಯೇಕ ಮಾರ್ಗ ಮಾಡಲಾಗಿದೆ.