ಜಿಲ್ಲೆ

9ರಂದು ಪಿಎಂ ನ್ಯಾಶನಲ್​ ಅಪ್ರೆಂಟೀಸ್​ಷಿಪ್​ ಮೇಳ

Avinash R

ಕಾಸರಗೋಡು: ಸರ್ಕಾರಿ ಐ.ಟಿ.ಐಯಲ್ಲಿ ಕೈಗಾರಿಕಾ ತರಬೇತಿ ಇಲಾಖೆಯ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೌಶಲ ಅಭಿವೃದ್ಧಿ ಸಚಿವಾಲಯ ಹಾಗೂ ರಾಜ್ಯ ಉದ್ಯೋಗ ನೈಪುಣ್ಯ ಇಲಾಖೆಗಳ ಸಹಯೋಗದೊಂದಿಗೆ ನಡೆಸುವ ಪ್ರಧಾನಮಂತ್ರಿ ನ್ಯಾಶನಲ್​ ಅಪ್ರೆಂಟಿಸ್​ಶಿಪ್​ ಮೇಳ ಡಿ.9ರಂದು ಬೆಳಗ್ಗೆ 10ಕ್ಕೆ ಜರುಗಲಿದೆ.

ಜಿಲ್ಲೆಯ ಉದ್ಯಮ ವಾಣಿಜ್ಯ ಸಂಸ್ಥೆಗಳಿಗೆ ಅಪ್ರೆಂಟಿಸರನ್ನು ಆಯ್ಕೆ ಮಾಡಬಹುದಾಗಿದೆ. ಇಂಜಿನಿಯರಿಂಗ್​, ನಾನ್​ ಇಂಜಿನಿಯರಿಂಗ್​ ಟ್ರೇಡ್​ಗಳಲ್ಲಿ ಐ.ಟಿ.ಐ ಅರ್ಹತೆ ಪಡೆದ ಉದ್ಯೋಗಿಗಳಿಗೆ ಭಾಗವಹಿಸಬಹುದು. ಅರ್ಹತೆ ಸಾಬೀತುಪಡಿಸುವ ಪ್ರಮಾಣಪತ್ರಗಳು, ಆಧಾರ್​ ಕಾರ್ಡ್​ಗಳನ್ನು ಹಾಜರುಪಡಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (9400690213, 04994 256440)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.