ಜಿಲ್ಲೆ

ಪ್ರಧಾನಿ ಮೋದಿಯವರ ಬೆಳಗಾವಿ ರೋಡ್ ಶೋ ಹೀಗಿರುತ್ತೆ ನೋಡಿ

Belagavi

ಬೆಳಗಾವಿ : ಫೆ.27ರಂದು ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಗೆ ಬೆಳಗಾವಿ ನಗರದಲ್ಲಿ ಭರ್ಜರಿ ಸಿದ್ಧತೆ ನಡೆದಿದೆ.
ನಗರದ ಸಿಪಿಎಡ್ ಮೈದಾನದಿಂದ ಯಡಿಯೂರಪ್ಪ ರಸ್ತೆಯಲ್ಲಿನ ಮಾಲಿನಿ ಸಿಟಿವರೆಗೆ 10ಕಿ.ಮೀ. ರೋಡ್ ಶೋಗೆ ತಯಾರಿ ನಡೆಸಿದ್ದು, ಎಸ್ಪಿಜಿ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ.

ರೋಡ್ ಶೋ ಜತೆಗೆ ರಾಜ್ಯ ಮಾತ್ರವಲ್ಲ ದೇಶದ ಗಮನ ಸೆಳೆಯುವಂತೆ‌ ವಿಶಿಷ್ಟ, ವಿನೂತನಗೊಳಿಸಲು ತಯಾರಿ ನಡೆಸಿದ್ದು, 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮುಂದಿಟ್ಟು ಈ ಹಿಂದೆ ಎಲ್ಲಿಯೂ ಆಗಿರದ ರೀತಿಯಲ್ಲಿ ರೋಡ್ ಶೋ ನಡೆಯಿಸಲು ಸಕಲ ಸಿದ್ದತೆ ನಡೆಸಲಾಗುತ್ತಿದ್ದು, ಜಿಲ್ಲೆಯ ಜನಪ್ತಯಿನಿಧಿಗಳ ವಿನೂತನ ಪ್ರಯತ್ನಕ್ಕೆ ಎಸ್ಜಿಪಿ ಹಾಗೂ ಪ್ರಧಾನಿ ಕಾರ್ಯಾಲಯ ಅನುಮತಿ ನೀಡಿದರೆ, ಬೆಳಗಾವಿ ರೋಡ್ ಶೋ ಐತಿಹಾಸಿಕ ರೋಡ್ ಶೋ ಆಗಲಿದೆ.

ಬೆಳಗಾವಿ ರೋಡ್ ಶೋ ವಿಶೇಷತೆಗಳು

1)ಸಿಪಿಎಡ್ ಮೈದಾನಕ್ಕೆ ಬಂದಿಳಿಯುವ ಪ್ರಧಾನಿಗೆ ಮಂತ್ರಿ, ಶಾಸಕರ ಬದಲು ಜಿಲ್ಲೆಯ ಕಾಯಕಯೋಗಿಗಳಿಂದಲೇ ಪ್ರಧಾನಿಗೆ ಹೂ ನೀಡಿ ಸ್ವಾಗತಿಸುವುದು
2)ಪೌರಕಾರ್ಮಿಕ, ರೈತ, ಕೃಷಿ ಕೂಲಿ ಕಾರ್ಮಿಕ, ಕಟ್ಟಡ ಕಾರ್ಮಿಕ, ಅಟೋ‌ ಚಾಲಕ, ಕ್ಷೌರೀಕ, ಅಗಸ, ಟೇಲರ್,ನೇಕಾರ ಹೀಗೆ ಹತ್ತು ಜನ ಕಾಯಕಯೋಗಿಗಳಿಂದ ಸ್ವಾಗತಿಸಲು ಸಲಹೆ
3)ಮೋದಿ ರೋಡ್ ಶೋ ನಡೆಯುವ ರಸ್ತೆಯುದ್ಧಕ್ಕೂ ಸಾಂಸ್ಕೃತಿಕ ಲೋಕವೇ ಅನಾವರಣಗೊಳ್ಳುವಂತೆ ತಯಾರಿ.ಇಡೀ ದೇಶದ ಬೇರೆ ಬೇರೆ ರಾಜ್ಯಗಳ ಸಂಸ್ಕೃತಿಕ ತಂಡಗಳಿಂದ ಸ್ವಾಗತಕ್ಕೆ ತಯಾರಿ
4)ರಾಷ್ಟ್ರ ಮಾತ್ರವಲ್ಲ ರಾಜ್ಯ ಅದರಲ್ಲೂ ಬೆಳಗಾವಿ ಜಿಲ್ಲೆಯ ಇತಿಹಾಸ ಪರಿಚಯಿಸಲು ದಾರಿಯುದ್ದಕ್ಕೂ ಭಿತ್ತಿ ಪತ್ರಗಳ ಪ್ರದರ್ಶನ
5)ರೋಡ ಶೋವನ್ನು ಶ್ರಮಿಕ ವರ್ಗದವರಿಂದ ಅವರ ವೇಷ ಭೂಷಣದೊಂದಿಗೆ ಸ್ವಾಗತಕ್ಕೂ ವ್ಯವಸ್ಥೆಗೆ ಸಿದ್ಧತೆ