ಜಿಲ್ಲೆ

ಪಿಎಂ ಕಿಸಾನ್ ಸಮ್ಮಾನ 36.18 ಕೋಟಿ ರೂ. ಬಿಡುಗಡೆ * 13ನೇ ಕಂತಿನ ಹಣ ವರ್ಗಾವಣೆ ಮಾಡಿದ ಪ್ರಧಾನಿ ಮೋದಿ

Dharwad

ಹಾವೇರಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ (ಪಿ.ಎಂ.ಕಿಸಾನ್) ಯೋಜನೆಯ 13ನೇ ಕಂತಿನ ಹಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಳಗಾವಿಯಲ್ಲಿ ಸೋಮವಾರ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಿದರು.
ಜಿಲ್ಲೆಯ ಎಲ್ಲ 19 ರೈತ ಸಂಪರ್ಕ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ನೇರ ಪ್ರಸಾರವನ್ನು ರೈತರು ವೀಕ್ಷಿಸಿದರು. ಈ ನೇರ ನಗದು ವರ್ಗಾವಣೆಯಲ್ಲಿ ಹಾವೇರಿ ಜಿಲ್ಲೆಯ 1,84,061 ರೈತರಿಗೆ 36.81 ಕೋಟಿ ರೂ. ಜಮೆ ಮಾಡಲಾಗುತ್ತಿದೆ. ಹಾನಗಲ್ಲ ತಾಲೂಕಿನ 37,086 ರೈತರಿಗೆ 7.41 ಕೋಟಿ ರೂ., ಬ್ಯಾಡಗಿ ತಾಲೂಕಿನ 16,372 ರೈತರಿಗೆ 3.27 ಕೋಟಿ ರೂ., ಹಾವೇರಿ ತಾಲೂಕಿನ 28,291 ರೈತರಿಗೆ 5.61 ಕೋಟಿ ರೂ., ಹಿರೇಕೆರೂರ ತಾಲೂಕಿನ 31,890 ರೈತರಿಗೆ 6.37 ಕೋಟಿ ರೂ., ರಾಣೆಬೆನ್ನೂರ ತಾಲೂಕಿನ 31,829 ರೈತರಿಗೆ 6.36 ಕೋಟಿ ರೂ., ಸವಣೂರ ತಾಲೂಕಿನ 18,591 ರೈತರಿಗೆ 3.71 ಕೋಟಿ ರೂ. ಹಾಗೂ ಶಿಗ್ಗಾಂವಿ ತಾಲೂಕಿನ 20,002 ರೈತರಿಗೆ 4 ಕೋಟಿ ರೂ. ಜಮೆ ಆಗುತ್ತಿದೆ. ರೈತರಿಗೆ ಸದರಿ ಯೋಜನೆಯಡಿ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳುವಂತೆ ರೈತರಿಗೆ ವಿನಂತಿಸಲಾಗಿದೆ.