ವಿಜಯಪುರ ಮತೇತ್ರ ವ್ಯಾಪ್ತಿಯ ಭೂತನಾಳ ತಾಂಡಾದಲ್ಲಿ ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಮತಯಾಚನೆ ಮಾಡಿದರು. ಶಂಕರ ಹೂಗಾರ, ವಿವೇಕಾನಂದ ಡಬ್ಬಿ, ಪ್ರಕಾಶ ಚವಾಣ ಮತ್ತಿತರರಿದ್ದಾರೆ. 
ಜಿಲ್ಲೆ

ದೇಶದ ಸುರಕ್ಷತೆಗೆ ಪ್ರಧಾನಿ ಮೋದಿ ಅತ್ಯವಶ್ಯ

ವಿಜಯಪುರ: ನಗರದ ವಾರ್ಡ್​ ನಂ. 4 ರ ಭೂತನಾಳ ತಾಂಡಾದಲ್ಲಿ ಗುರುವಾರ ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಬಿಜೆಪಿ ಲೋಕಸಭೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.

ನಂತರ ದುರ್ಗಾದೇವಿ ದೇವಸ್ಥಾನ ಬಳಿ ನಡೆದ ಸಭೆಯಲ್ಲಿ ಮಾತನಾಡಿದ ರಾಮನಗೌಡ ಪಾಟೀಲ ಯತ್ನಾಳ, ಈಗ ನಡೆಯುತ್ತಿರುವ ಚುನಾವಣೆ ಕೇವಲ ಅಧಿಕಾರಕ್ಕಾಗಿ ಅಲ್ಲ.

ಬದಲಾಗಿ ದೇಶದ ಸುರತೆ, ಸನಾತನ ಧರ್ಮ ಉಳಿಸಲು ಮತ್ತು ಅಭಿವೃದ್ಧಿಗಾಗಿ ನಡೆಯುತ್ತಿದೆ. ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಜಗದ್ಗುರು ಭಾರತ ನಿರ್ಮಾಣ ಸಾಧ್ಯ. ಮೋದಿ ಕೈ ಬಲಪಡಿಸಲು ರಮೇಶ ಜಿಗಜಿಣಗಿ ಅವರ ಗೆಲುವಿಗೆ ನಾವೆಲ್ಲ ಕಂಕಣಬದ್ದರಾಗೋಣ. ಅಲ್ಲದೆ, ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ ಎಂದರು.

ವಿವೇಕಾನಂದ ಡಬ್ಬಿ, ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಪ್ರಕಾಶ ಚವಾಣ ಮತ್ತಿತರರಿದ್ದರು.