ಜಿಲ್ಲೆ

ಪಿಎಂ ಕಿಸಾನ್ ಇ ಕೆವೈಸಿಯಲ್ಲಿ ಹಿನ್ನಡೆ

ಮಂಜುನಾಥ ಅಂಗಡಿ

ಮಂಜುನಾಥ ಅಂಗಡಿ ಧಾರವಾಡ
ರೈತರ ಅನುಕೂಲಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಧಾನಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೊಳಿಸಿವೆ. ಪ್ರತಿಯೊಬ್ಬ ರೈತನಿಗೆ ಕೇಂದ್ರ ಸರ್ಕಾರ ವಾರ್ಷಿಕ ತಲಾ 2,000 ರೂ.ಗಳಂತೆ 3 ಕಂತು ಹಾಗೂ ರಾಜ್ಯ ಸರ್ಕಾರ 2 ಕಂತುಗಳಲ್ಲಿ 4,000 ಜಮೆ ಮಾಡುತ್ತವೆ. ಈ ಯೋಜನೆಗೆ ಲಾನುಭವಿಗಳನ್ನಾಗಿ ಮಾಡಲು ಕೃಷಿ ಇಲಾಖೆ ಹಿಂದೆ ಬಿದ್ದಿದೆ.
ಜಿಲ್ಲೆಯಲ್ಲಿ 1,22,794 ರೈತ ಲಾನುಭವಿಗಳಿದ್ದಾರೆ. ಈ ಪೈಕಿ 89,111 ಲಾನುಭವಿಗಳು ಮಾತ್ರ ಪಿಎಂ ಕಿಸಾನ್ ಯೋಜನೆಗೆ ಇ- ಕೆವೈಸಿ ಮಾಡಿಸಿಕೊಂಡಿದ್ದಾರೆ. 3- 4 ವರ್ಷಗಳಾದರೂ ಇನ್ನೂ 33,726 ಲಾನುಭವಿಗಳು ಇ- ಕೆವೈಸಿ ಮಾಡಿಸಿಕೊಂಡಿಲ್ಲ.
* ಏನಿದು ಪಿಎಂ ಕಿಸಾನ್?:
ಪ್ರತಿಯೊಬ್ಬ ರೈತನಿಗೆ ಬೀಜ- ಗೊಬ್ಬರ ಖರೀದಿ ಹಾಗೂ ಇನ್ನಿತರ ಸಣ್ಣಪುಟ್ಟ ಖರ್ಚು ನಿಭಾಯಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ತಲಾ 3 ಕಂತುಗಳಂತೆ ವಾರ್ಷಿಕ 6,000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುವ ಯೋಜನೆ ಜಾರಿಗೆ ತಂದಿದ್ದರು. ಇದರಿಂದ ಪ್ರೇರಣೆಗೊಂಡ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಸರ್ಕಾರದಿಂದ 2 ಕಂತುಗಳಂತೆ ವಾರ್ಷಿಕ 4,000 ರೂ. ಜಮಾ ಮಾಡಲು ೋಷಿಸಿದ್ದರು. ಎರಡೂ ಸರ್ಕಾರಗಳ ಕಂತುಗಳ ಹಣ ರೈತರ ಖಾತೆಗೆ ಜಮೆಯಾಗುತ್ತಿವೆ.
* ಇ- ಕೆವೈಸಿ ಏಕೆ:?
ಪಿಎಂ ಕಿಸಾನ್ ಯೋಜನೆಗೆ ನೋಂದಾಯಿತ ರೈತರು ಬ್ಯಾಂಕ್ ಪಾಸ್‌ಬುಕ್, ಚಾಲ್ತಿ ಪಹಣಿಪತ್ರ ಮತ್ತು ಆಧಾರ್ ಕಾರ್ಡ್ ನೀಡಿ ಇ- ಕೆವೈಸಿ ಮಾಡಿಸಬೇಕು. ಜಮೀನು ಪರಭಾರೆ ಅಥವಾ ಮಾರಾಟ ಮಾಡಿದವರು, ಮೃತ ರೈತರನ್ನು ಯೋಜನೆಯಿಂದ ಕೈ ಬಿಡಲು ಇ- ಕೆವೈಸಿ ಕಡ್ಡಾಯ.
ಆದರೆ, ಇ- ಕೆವೈಸಿ ಮಾಡಿಸುವಂತೆ ರೈತರಲ್ಲಿ ಜಾಗೃತಿ ಮೂಡಿಸುವಲ್ಲಿ ಕೃಷಿ ಇಲಾಖೆ ವಿಲವಾಗಿದೆ. ಇಲಾಖೆಯಲ್ಲಿ ಪ್ರಚಾರ ವಾಹನಗಳಿದ್ದರೂ ಹಳ್ಳಿಗಳಿಗೆ ತೆರಳುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿ- ಸಿಬ್ಬಂದಿ ನಾಮಕಾವಾಸ್ತೆ ಪತ್ರಿಕಾ ಪ್ರಕಟಣೆ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಗ್ರಾ.ಪಂ. ಕಚೇರಿಗಳು, ಹಳ್ಳಿಕಟ್ಟೆಗಳು, ಸ್ಥಳೀಯ ಬ್ಯಾಂಕ್‌ಗಳು, ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗಳಲ್ಲಿ ಭಿತ್ತಿಪತ್ರಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ಜಿಲ್ಲೆಯ 33,726 ರೈತ ಲಾನುಭವಿಗಳು ಇನ್ನೂ ಇ- ಕೆವೈಸಿ ಮಾಡಿಸಿಕೊಂಡಿಲ್ಲ.

ಜಿಲ್ಲೆಯ ಅಂಕಿ- ಅಂಶ
ತಾಲೂಕು         ಬಾಕಿ
ನವಲಗುಂದ     10,746
ಧಾರವಾಡ        7,640
ಕುಂದಗೋಳ     5,704
ಹುಬ್ಬಳ್ಳಿ            5,586
ಕಲಘಟಗಿ         3,876
ಅಳ್ನಾವರ              57
ಅಣ್ಣಿಗೇರಿ             56
ಹುಬ್ಬಳ್ಳಿ ನಗರ        58

--- ಕೋಟ್ ---
ಪಿಎಂ ಕಿಸಾನ್ ನೋಂದಾಯಿತ ರೈತರು ಕಡ್ಡಾಯವಾಗಿ ಇ- ಕೆವೈಸಿ ಮಾಡಿಕೊಳ್ಳಬೇಕು. https://pmkisan.gov.in ಮೂಲಕ ಅಥವಾ ಪಿ.ಎಂ. ಕಿಸಾನ್ ಮೊಬೈಲ್ ಆ್ಯಪ್ ಮುಖಾಂತರ ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿಗೆ ರೈತ ಸಂಪರ್ಕ ಕೇಂದ್ರ, ಸಿಎಸ್‌ಸಿ ಸೆಂಟರ್, ಗ್ರಾಮ ಒನ್ ಅಥವಾ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬೇಕು.
- ಶಿವನಗೌಡ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ