ರಾಣೆಬೆನ್ನೂರ: ರೈತರೊಬ್ಬರ ಮೊಬೈಲ್ಗೆ ಪಿಎಂ ಕಿಸಾನ್ ಎಪಿಕೆ ಆ್ಯಪ್ ಕಳುಹಿಸಿ ಅದನ್ನು ಇನ್ಸ್ಟಾಲ್ ಮಾಡಿಸಿ ಅವರ ಖಾತೆಯಿಂದ 72 ಸಾವಿರ ರೂ.ಅನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಕುರಿತು ಹಾವೇರಿ ಸೈಬರ್ ಕೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ತುಮ್ಮಿಕನಟ್ಟಿ ಗ್ರಾಮದ ಪ್ರವಿಣಕುಮಾರ ಬಸವರಾಜಪ್ಪ ಜಾದವ್ (32) ಎಂಬುವರಿಗೆ ಮೋಸ ಮಾಡಿರುವುದು.
ಇವರಿಗೆ ಯಾರೋ ಅಪರಿಚಿತ ವ್ಯಕ್ತಿ ಪಿಎಂ ಕಿಸಾನ್ ಎಪಿಕೆ ಎಂಬ ಆಪ್ ಕಳುಹಿಸಿದ್ದು, ಪ್ರವಿಣಕುಮಾರ ಅದನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ನಂತರ ಅವರ ಖಾತೆಯಲ್ಲಿದ್ದ 72 ಸಾವಿರ ರೂ. ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.