ಜಿಲ್ಲೆ

ಪೌರ ಕಾರ್ಮಿಕರಿಂದ ಸ್ವಾತಂತ್ರ್ಯದ ಪಥ ಸಂಚಲನ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಪ್ರಥಮ ಬಾರಿಗೆ ಬೆಳಗಾವಿಯಲ್ಲಿ ಸ್ವಾತಂತ್ರ್ಯೋತ್ಸವ ದ ಪಥ ಸಂಚಲನದಲ್ಲಿ ಪೊಲೀಸ್‌ ಮತ್ತು ಗೃಹ ರಕ್ಷಕರೊಂದಿಗೆ ಪಾಲಿಕೆ ಪೌರ ಕಾರ್ಮಿಕರೂ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ.

ಬೆಳಗಾವಿ‌ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ಸ್ವಾತಂತ್ರ್ಯ ದಿ‌ನದಂದು ಪಥ ಸಂಚಲನಕ್ಕೆ ಪುರುಷರು, ಮಹಿಳೆಯರು ಸೇರಿ ಒಟ್ಟು 33 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಎಲ್ಲರಿಗೂ ಖಾಕಿ ಪ್ಯಾಂಟ್‌, ಶರ್ಟ್‌, ಸೈಡ್‌ ಬೆಲ್ಟ್‌,ತಲೆಗೆ ಟೊಪ್ಪಿಗೆಗಳನ್ನು ನೀಡಲಾಗಿದೆ.

ಕಳೆದ ಒಂದು ತಿಂಗಳಿನಿಂದ ಅರ್ಮಿ ಅಧಿಕಾರಿಗಳಿಂದ ಪೌರ ಕಾರ್ಮಿಕರಿಗೆ ತರಬೇತಿ ನೀಡಿದ್ದಾರೆ. ‌ಇವರೆಲ್ಲರೂ ಆ.15 ರಂದು ಸ್ವಾತಂತ್ರ್ಯ ದಿನ ಸುವರ್ಣ ವಿಧಾನಸೌಧ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಪರೇಡ್ ನಲ್ಲಿ ಭಾಗವಹಿಸಲಿದ್ದಾರೆ.

ಮಹಾನಗರ ‌ಪಾಲಿಕೆ ಆಯುಕ್ತೆ ಶುಭ.ಬಿ.‌ ಅವರ ‌ನೂತನ ಕಾರ್ಯಕ್ರಮಕ್ಕೆ ಪಾಲಿಕೆ ಸದಸ್ಯರು, ಅಧಿಕಾರಿ, ಸಿಬ್ಬಂದಿ ಮೆಚ್ಚುಗೆ ವ್ಯಕ್ತವಾಗಿದೆ.