ಮಧುಗಿರಿ : ಪೋಲೇನಹಳ್ಳಿಯಲ್ಲಿಇತ್ತೀಚೆಗೆ ಹತ್ಯೇಗಿಡಾದ ದಲಿತ ಆನಂದನ ಕುಟುಂಬಕ್ಕೆ ಸರ್ಕಾರ ಐದು ಎಕರೆ ಜಮೀನು ಮಂಜೂರು ಮಾಡುವ ಜತೆಗೆ 25 ಲ ರೂ. ಪರಿಹಾರ ನೀಡಬೇಕೆಂದು ರಾಜ್ಯ ಮೀಸಲಾತಿ ಹೋರಾಟದ ಒಕ್ಕೂಟಗಳ ಸಮಿತಿ ಮುಖಂಡ ಬಸವರಾಜ ಕೌತಾಳ್ ಒತ್ತಾಯಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಪೋಲೆನಹಳ್ಳಿಯ ಮೃತ ಆನಂದನ ಕುಟುಂಬಸ್ಥರನ್ನು ಸೋಮವಾರ ರಾಜ್ಯ, ಜಿಲ್ಲಾ ಮತ್ತು ತಾಲೂಕುಮಟ್ಟದ ವಿವಿಧ ದಲಿತಪರ, ಪ್ರಗತಿಪರ ಹೋರಾಟಗಾರರು ಭೇಟಿ ಮಾಡಿ, ಟನೆ ನೈಜತೆಯ ಬಗ್ಗೆ ಮಾಹಿತಿ ಪಡೆದು ಸಾಂತ್ವನ ಹೇಳಿದರು.
ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಪೋಲೇನಹಳ್ಳಿಯ ರಾಮಚಂದ್ರಪ್ಪ ಎಂಬುವರ ಮಗ ಆನಂದ ಪ್ರಶ್ನೆ ಮಾಡಿದ್ದಕ್ಕೆ ಕುಪಿತಗೊಂಡಿದ್ದ ಗ್ರಾಪಂ ಬಿಲ್ ಕಲೆಕ್ಟರ್ ನಾಗೇಶ್ ಎಂಬಾತ ಕಾರು ಗುದ್ದಿಸಿ ಹತ್ಯೆ ಮಾಡಿದ್ದ. ಈ ಕಾರಣಕ್ಕೆ ದಲಿತ ಸಂಟನೆ ಮುಖಂಡರು ಮೃತನ ಕುಟುಂಬಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.
ನಂತರ ಮಾತನಾಡಿದ ಬಸವರಾಜ ಕೌತಾಳ, ಕೊಲೆಯಾಗಿರುವ ಆನಂದನ ಪತ್ನಿಗೆ ಸರ್ಕಾರ ಉದ್ಯೋಗ ನೀಡಬೇಕು ಮತ್ತು ಮಗುವಿಗೆ ಉನ್ನತ ಶಿಣದವರೆಗೂ ಉಚಿತ ಶಿಣ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಆರೋಪಿ ನಾಗೇಶನ ತಂದೆ ತಾಯಿಯನ್ನು ಆಪಾದನೆ ಪಟ್ಟಿಯಲ್ಲಿ ಸೇರಿಸಿ ಬಂಧಿಸಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಾನೂನಾತ್ಮಕವಾಗಿ ಶಿೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಗತಿಪರ ಚಿಂತಕ ಪೊ. ನರಸಿಂಹಪ್ಪ ಕಾಳೇನಳ್ಳಿ ಮಾತನಾಡಿ, ಸೌಹಾರ್ದಯುತವಾಗಿ ಬಾಳಿ ಬದುಕಬೇಕಾದ ಎಸ್ಸಿ& ಎಸ್ಟಿ ಸಮುದಾಯಗಳು ಜಗಳವಾಡಿ ಕೊಲೆಯಾಗಿರುವುದು ನೋವಿನ ಸಂಗತಿ. ಜಿಲ್ಲಾ ಉಸ್ತುವಾರಿ ಸಚಿವರೂ ದಲಿತರಾಗಿದ್ದು, ರಾಜಕೀಯ ಜನ್ಮ ನೀಡಿದ ಮಧುಗಿರಿ ತಾಲೂಕಿನಲ್ಲಿ ಆಗಿರುವ ಟನೆಯನ್ನು ಗಂಭೀರವಾಗಿ ಪರಿಗಣಿಸಿ ಶೋಷಿತರ ಪರ ನಿಲ್ಲಬೇಕು ಎಂದರು.
ದಲಿತ ಮುಖಂಡ ಡಿ.ಟಿ.ವೆಂಕಟೇಶ್ ಮಾತನಾಡಿ, ಆನಂದನ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆ ಮತ್ತು ಗ್ರಾಪಂ ಅಗತ್ಯ ಸೌಲಭ್ಯ ಕಲ್ಪಿಸಿಕೊಡಬೇಕು ಎಂದರು.
ಜಾಗೃತ ಕರ್ನಾಟಕ ರಾಜ್ಯಸಮಿತಿ ಸದಸ್ಯ ಅನಿಲ್ ಕುಮಾರ್ ಚಿ.ದಾಳವಟ, ತೊಂಡೋಟಿ ರಾಮಾಂಜಿನಪ್ಪ, ವಕೀಲ ನರಸಿಂಹಮೂರ್ತಿ, ಜೀವಿಕ ಮಂಜು, ಚಿಕ್ಕಮ್ಮ, ನಿವೃತ್ತ ಪ್ರಾಂಶುಪಾಲ ಮುನೀಂದ್ರ ಕುಮಾರ್, ಉಪನ್ಯಾಸಕ ರಾಮಚಂದ್ರಪ್ಪ, ನವೀನ್ ಪೂಜಾರಹಳ್ಳಿ, ನರಸಿಯಪ್ಪ ಇತರರು ಇದ್ದರು.