ಮುಳಬಾಗಿಲು: ತಾಲೂಕಿನ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಕೊತ್ತೂರು ಗಂಗಿರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಮಂಡಿಕಲ್ಲು ಎಂ.ಎಸ್. ಮಂಜುನಾಥ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಆರ್.ಶಿವಶಂಕರ್ ಘೋಷಿಸಿದರು.
ನೂತನ ಅಧ್ಯಕ್ಷ ಗಂಗಿರೆಡ್ಡಿ ಮಾತನಾಡಿ, ಪಿಎಲ್ಡಿ ಬ್ಯಾಂಕ್ ಅಭಿವೃದ್ಧಿಗಾಗಿ ಎಲ್ಲರೂ ಸಹಕಾರ ನೀಡಬೇಕು
ಎಂದು ಮನವಿ ಮಾಡಿದರು.
ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾದ ಅಲಂಗೂರು ಶಿವಣ್ಣ, ಮರಕಲಘಟ್ಟ ಎಂ.ಎನ್. ಶಂಕರನಾರಾಯಣ, ರಾಜೇಂದ್ರಹಳ್ಳಿ ಆರ್.ಆರ್.ರಾಜೇಂದ್ರ ಗೌಡ, ಉತ್ತನೂರು ಶ್ರೀನಿವಾಸ್, ಎಚ್.ಗೊಲ್ಲಹಳ್ಳಿ ಕೆ.ಸತೀಶ್, ರಚ್ಚಬಂಡಹಳ್ಳಿ ಶ್ರೀರಾಮಪ್ಪ, ಕರಡಗೂರು ಶ್ರೀನಿವಾಸ, ಮಲ್ಲನಾಯಕನಹಳ್ಳಿ ಮುನಿವೆಂಕಟಮ್ಮ ಇದ್ದರು.
ಪ್ರಮಾಣ ಪತ್ರ ಹರಿದು ಆಕ್ರೋಶ: ಆವಣಿ ಸಾಮಾನ್ಯ ಕ್ಷೇತ್ರದ ನಿರ್ದೇಶಕ ಎಂ.ಎನ್.ಶಂಕರನಾರಾಯಣ ಅವರು ತಮಗೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡರು ಸಹಕಾರ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಅಧಿಕಾರಿ ನೀಡಲು ಬಂದ ಪ್ರಮಾಣ ಪತ್ರವನ್ನೇ ಹರಿದು ಕಾಂಗ್ರೆಸ್ ಸ್ಥಳಿಯ ಮುಖಂಡರ ವಿರುದ್ಧ
ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ಗೆ ನಿರಾಸೆ: ಈ ಹಿಂದೆ ನಡೆದ ನಿರ್ದೇಶಕರ ಸ್ಥಾನ ದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ನಡೆದಿತ್ತು. ಆದರೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ತೆಕ್ಕೆಗೆ ಸೇರಿರುವುದು ಜೆಡಿಎಸ್ಗೆ ನಿರಾಸೆ ಉಂಟುಮಾಡಿದೆ. ಮ್ಯಾಜಿಕ್ ನಂಬರ್ ಸಿಗದ ಕಾರಣ ಜಿ.ಆನಂದರೆಡ್ಡಿ ಅವರು ತಮ್ಮ ಪುತ್ರ ಎ.ಭರತ್ ಅವರನ್ನು ಕಣದಿಂದ ಹಿಂದಕ್ಕೆ ಸರಿದಿದ್ದು, ಜೆಡಿಎಸ್ ಬೆಂಬಲದೊಂದಿಗೆ ಗೆದ್ದಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂ.ಎಸ್. ಮಂಜುನಾಥ್ ಕಾಂಗ್ರೆಸ್ ಪಾಳೆ ಸೇರಿಕೊಂಡಿದ್ದು, ಹಾಗೂ ಮೂವರು ನಿರ್ದೇಶಕರು ಬೆಂಬಲ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಜೆಡಿಎಸ್ ಬೆಂಬಲಿತ ನಿರ್ದೇಶಕರಾದ ಶಿನಿಗೇನಹಳ್ಳಿ ಎ. ಭರತ್, ಸೋಮೇಶ್ವರಪಾಳ್ಯದ ಎಂ. ಪಿ. ಭಾಗ್ಯ ಲಕ್ಷ$್ಮಮ್ಮ ಶ್ರೀನಿವಾಸ್, ಸೌಟೂರು ಟಿ.ವಿಶ್ವನಾಥರೆಡ್ಡಿ, ಗೋಪಸಂದ್ರ ಕೆಂಪಮ್ಮ ಸುಬ್ಬೆಗೌಡ, ಕಾಡೇನಹಳ್ಳಿ ಕೆ.ಎಸ್. ಅಶೋಕ್, ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್. ನಾಗರಾಜ್, ವಕ್ತಾರ ಎಂ.ಎಸ್. ಶ್ರೀನಿವಾಸ್ ರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಎಂ.ಎಸ್. ಶ್ರೀನಿವಾಸ ರೆಡ್ಡಿ ಇದ್ದರು.
"ನಾನು ಸುಮಾರು ನಾಲ್ಕು ಬಾರಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದೇನೆ. ಇಷ್ಟಾದರೂ ಕಾಂಗ್ರೆಸ್ ಮುಖಂಡರು ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಲಾಯಕ್ಕು ಇಲ್ಲ ಎಂದು ಹೇಳಿರುವುದು ಖಂಡನೀಯ. ನನ್ನ ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ."
- ಶಂಕರನಾರಾಯಣ ನಿರ್ದೇಶಕ