ಜಿಲ್ಲೆ

ದಶಕಗಳ ಬಳಿಕ ಚಿಂತಾಮಣಿಯಲ್ಲಿ ಪಿಎಲ್​ಡಿ ಬ್ಯಾಂಕ್​ ಆರಂಭ

ಎನ್.ವೆಂಕಟೇಶ್

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್​ ಚಾಲನೆ

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ

ನಗರದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದ ಕಟ್ಟಡದಲ್ಲಿ ದಶಕಗಳ ನಂತರ ಚಿಂತಾಮಣಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್​ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್​ ಮಂಗಳವಾರ ಚಾಲನೆ ನೀಡಿದರು.

ಸಚಿವ ಮಾತನಾಡಿ, ಚಿಂತಾಮಣಿಯಲ್ಲಿ ಪಿಎಲ್​ಡಿ ಬ್ಯಾಂಕ್​ನ್ನು 34 ವರ್ಷಗಳ ಹಿಂದೆ ನಿಲ್ಲಿಸಿದ್ದರೂ, 1999ರಲ್ಲಿ ಬ್ಯಾಂಕ್​ ವಹಿವಾಟು ಸ್ಥಗಿತಗೊಂಡಿತ್ತು ಅದನ್ನು ಮತ್ತೆ ಪ್ರಾರಂಭ ಮಾಡಬೇಕೆಂದು 2011&12 ರಲ್ಲಿ ಗುಟ್ಟಾಗಿ ಪ್ರಯತ್ನವಾಗಿತ್ತು ಎಂದರು.

ಆದರೆ ನಾನು ಅಂದಿನ ಸಹಕಾರ ಸಚಿವರಾಗಿದ್ದ ಪುಟ್ಟಸ್ವಾಮಿಗೌಡರು ಇದೀಗ ಸ್ವಾಮೀಜಿ ಆಗಿದ್ದಾರೆ ಅವರೊಂದಿಗೆ ಚರ್ಚೆ ನಡೆಸಿ ಕಾನೂನು ಬದ್ಧವಾಗಿ ಪ್ರಾರಂಭ ಮಾಡುವಂತೆ ಒತ್ತಡ ಹೇರಿದ ಪರಿಣಾಮ ಸ್ಥಗಿಗೊಂಡಿತ್ತು ಎಂದ ಸಚಿವರು ಅಂದಿನಿಂದ ಈ ಬ್ಯಾಂಕ್​ ಕಡೆ ಯಾರು ಗಮನಕೊಡಲೇ ಇಲ್ಲ ಎಂದರು.

ಪಿಎಲ್​ಡಿ ಬ್ಯಾಂಕ್​ 1989ರಲ್ಲಿ ಚುನಾವಣೆ ನಡೆದಾಗ ನಮ್ಮ ತಂದೆಯವರು ಮತ್ತು ವೇಮಗಲ್​ನ ಸಿ.ಬೈರೇಗೌಡರ ಬೆಂಬಲಿಗರ ನಡುವೆ ಗಲಾಟೆಯಾಗಿ, ಲಾಠಿಚಾರ್ಜ ಮತ್ತು ಗಾಳಿಯಲ್ಲಿ

ಗುಂಡು ಸಹಾ ಹಾರಿಸಿದ್ದನ್ನು ಸಚಿವರು ನೆನಪಿಸಿದರು.

ಸರ್ಕಾರ ಮತ್ತು ಸ್ಥಳಿಯ ಮುಖಂಡರ ಸಹಕಾರದಿಂದ ಬ್ಯಾಂಕ್​ ಕಾರ್ಯಾಚರಣೆ ಸುಗಮಗೊಳಿಸಲು ಒಪ್ಪಂದ ಮಾಡಿಕೊಂಡಿದ್ದು, ರೈತರಿಗೆ ಸಾಲ, ಬಡ್ಡಿ ಮನ್ನಾ ಯೋಜನೆ, ಸದಸ್ಯತ್ವ ವೃದ್ಧಿ ಹಾಗೂ ವಾರ್ಷಿಕ ಸಭೆಗಳ ಮೂಲಕ ಸಂಟನೆಯ ಸಬಲೀಕರಣದ ಮಾಡಬೇಕು. ಬ್ಯಾಂಕ್​ ಪುನಶ್ಚೇತನವು ಗ್ರಾಮೀಣ ಆರ್ಥಿಕತೆಯಲ್ಲಿ ಸಕಾರಾತ್ಮಕ ಬದಲಾವಣೆ ತರುವುದನ್ನು ನಿರೀಸಲಾಗಿದೆ. ಜತೆಗೆ ಸ್ಥಳಿಯ ಅಭಿವೃದ್ಧಿ, ಸಾಲದ ನಿಗ್ರಹ, ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ

ಉತ್ತೇಜಿಸುವ ಕಾರ್ಯಗಳು ಮುಂದುವರಿಯವಂತೆ ಸೂಚಿಸಿದರು.