ಜಿಲ್ಲೆ

ಯರಗಟ್ಟಿಯಲ್ಲಿ ರಸ್ತೆ ಅಪಘಾತ ಎಎಸ್ಐ  ಸಾವು

ಮಂಜುನಾಥ ಕೋಳಿಗುಡ್ಡ


ಬೆಳಗಾವಿ: ಯರಗಟ್ಟಿ ಪಟ್ಟಣದಲ್ಲಿ ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮುರಗೋಡ ಠಾಣೆ ಎಎಸ್ಐ ಮೃತಪಟ್ಟಿದ್ದಾರೆ.
ಯರಗಟ್ಟಿ ಪಟ್ಟಣದ ವಿಜಯಕಾಂತ‌ ಮಿಕಲಿ (48) ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ‌ ಮುರಗೋಡ ಠಾಣೆಯಿಂದ ಯರಗಟ್ಟಿ ಪಟ್ಟಣಕ್ಕೆ ಬರುತ್ತಿರುವ ಸಂದರ್ಭದಲ್ಲಿ ಎದುರಗಡೆಯಿಂದ ಬರುತ್ತಿದ್ದ ವಾಹನದ ಹೈಪೋಕಸ್ ಲೈಟ್ ನಿಂದ ಎದುರಗಡೆ ರಸ್ತೆ ಕಾಣದೆ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಯರಗಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.