ಜಿಲ್ಲೆ

ಆಟ ಮತ್ತು ಪಾಠ ಒಂದೇ ನಾಣ್ಯದ ಎರಡು ಮುಖಗಳು

ಕೋಲಾರ ಡೆಸ್ಕ್

ಶ್ರೀನಿವಾಸಪುರ:  ಆಟ‚ ಪಾಠಗಳು ಒಂದೇ ನಾಣ್ಯದ ಎರಡು ಮುಖಗಳು. ವಿದ್ಯಾರ್ಥಿಗಳು ಆಟಗಳು ಪಾಠಗಳನ್ನು ಎರಡನ್ನು ಸರಿಸಮಾನವಾಗಿ ಸ್ವೀಕರಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.

ಪಟ್ಟಣದ ಅಮಾನಿಕರೆ ಕ್ರೀಡಾಂಗಣದಲ್ಲಿ ಶನಿವಾರ ಪ್ರಾಥಮಿಕ, ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಕ್ರೀಡೆಗಳಲ್ಲಿ ಭಾಗವಹಿಸದೆ, ಕ್ರೀಡೆಯನ್ನು ನಿತ್ಯ ಜೀವನ ಶೈಲಿಗೆ ಆಳವಡಿಸಿಕೊಳ್ಳಬೇಕು. ಅಧಿಕಾರ ಹೋಗಿ ಬರಬಹುದು ಆದರೆ ಆರೋಗ್ಯ ಬಹಳ ಮುಖ್ಯ. ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿದ್ದರೆ ಎಲ್ಲ ಅಧಿಕಾರವನ್ನು ಪಡೆಯಬಹುದು. ಕ್ರೀಡೆಗಳಲ್ಲಿ ಸೋಲು, ಗೆಲವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.

ಅಮಾನಿಕರೆಯು ಸುಮಾರು 50 ರಿಂದ 60 ಎಕರೆ ಇದ್ದು, ಪಟ್ಟಣಕ್ಕೆ ನೀರು ಸರಬಾರಜು ಮಾಡಲು ಲಕ್ಷಿ$್ಮಪುರ, ರೋಣೂರು ಭಾಗಗಳಿಂದ ನೀರು ಹರಿಸಲಾಗುವುದು. ಕರೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಕೆರೆ ಕಟ್ಟೆಯ ಮೇಲೆ ಪಾರ್ಕ್​ ನಿರ್ಮಿಸಿ ಅಲ್ಲಿ ವಾಕಿಂಗ್​ ಮಾಡಲು ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಕರೆಯಂಗಳವನ್ನು ಕೆಲವರು ಒತ್ತುವರಿ ಮಾಡಿದ್ದು, ಅದನ್ನ ಅತಿ ಶೀಘ್ರವಾಗಿ ಒತ್ತುವರಿ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಈ ಕ್ರೀಡಾಂಗಣವನ್ನು ಸುಸಜಿತವಾಗಿ ನಿಮಾರ್ಣ ಮಾಡಲು ಬೇಕಾದ ಎಲ್ಲ ರೂಪುರೇಷಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಿಇಒ ಬಿ.ಸಿ.ಮುನಿಲಕ್ಷ$್ಯಯ್ಯ ಮಾತನಾಡಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸೋಲು&ಗೆಲವು ಒಂದೇ ನಾಣ್ಯದ ಎರಡು ಮುಖಗಳಂತೆ, ತೀರ್ಪುಗಾರರು ನೀಡುವಂತಹ ತೀರ್ಪು ಅಂತಿಮವಾಗಿರುವುದರಿಂದ ಕ್ರೀಡಾಪಟುಗಳ ತೀರ್ಪುಗಾರರು ನೀಡುವಂತಹ ರ್ನಿಣಯವನ್ನು ಗೌರವಿಸಿ ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಸರ್ಕಾರಿ ನೌಕರರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಎ.ಸುಜಾತಾ, ಖಜಾಂಚಿ ಸಿ. ಶಿವಣ್ಣ, ಆರ್​.ಎಸ್​.ರೆಡ್ಡಪ್ಪ, ಕಾರ್ಯದರ್ಶಿ ರಘುನಾಥರೆಡ್ಡಿ, ಖಜಾಂಚಿ ಎನ್​.ಬಿ.ವೇಣುಗೋಪಾಲ್​, ಟಿಪಿಒ ವೆಂಕಟಸ್ವಾಮಿ, ಇಸಿಒ ಕೆ.ಸಿ.ಶ್ರೀನಿವಾಸ್​, ಸಿಆರ್​ಪಿಗಳಾದ ರಾಧಕೃಷ್ಣ, ವರದರೆಡ್ಡಿ ಇದ್ದರು.