ಜಿಲ್ಲೆ

ಸಿದ್ದಾಪುರದಲ್ಲಿ ಪ್ಲಾಸ್ಟಿಕ್‌ ವಶ

Uttara Kannada - Subash Hegde

ಸಿದ್ದಾಪುರ :ಇಲ್ಲಿನ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ ಸಂತೋಷ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರಾದ ಲಕ್ಷ್ಮೀ  ನಾಯ್ಕ, ಜ್ಞಾನೇಶ ಮತ್ತು ವಿನಾಯಕ, ಸಿದ್ದಾಪುರ ಪಟ್ಟಣ ಪಂಚಾಯತ ಸಿಬ್ಬಂದಿಗಳೊಂದಿಗೆ ಹಠಾತ್ತನೆ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್‌ನ ಮಾರಾಟವನ್ನು ತಡೆಗಟ್ಟಲು ಹೊಲ್ಸೇಲ್ ಅಂಗಡಿಗಳು, ಹೂ ಹಣ್ಣು ಅಂಗಡಿಗಳು, ಕಿರಾಣಿ ಅಂಗಡಿಗಳು, ಬೇಕರಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ (ಪ್ಲಾಸ್ಟಿಕ್ ಕಪ್, ಸ್ಪೂನ್ ಮತ್ತು ಕ್ಯಾರಿಬ್ಯಾಗ್ ಇತ್ಯಾದಿಗಳನ್ನೊಳಗೊಂಡು) ಸುಮಾರು 48 ಕೆಜಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್

(SUP) ವಸ್ತುಗಳನ್ನು ವಶಪಡಿಸಿಕೊಂಡು ಒಟ್ಟು ರೂ. 1,900 ದಂಡವನ್ನು ಅಂಗಡಿ ಮಾಲೀಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ

ಗುರುವಾರ ದಂಡ ವಿಧಿಸಲಾಯಿತು.

ಇದೇ ಸಂದರ್ಭದಲ್ಲಿ ಸದರಿ ಪ್ರದೇಶಗಳ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ, ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್

(SUP) ವಸ್ತುಗಳನ್ನು (ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್, ಬಾವುಟ, ಪ್ಲಾಸ್ಟಿಕ್ ತಟ್ಟೆ,

ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಸ್ಟಾçಗಳು, ಕ್ಲಿಂಗ್ ಫಿಲ್ಮ್ ರಸ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ

ಹಾಗೂ ಥರ್ಮೊಕಾಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸನಿಂದ ತಯಾರಾದಂತಹ ವಸ್ತುಗಳು) ಉಪಯೋಗಿಸದಂತೆ ಜಾಗೃತಿ ಮೂಡಿಸಿ,

ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉಪಯೋಗವನ್ನು ಸಂಪೂರ್ಣವಾಗಿ ನಿಷೇಧಿಸಿ ಬದಲಾಗಿ ಅಡಿಕೆ ಎಲೆ , ಕಟ್ಟಿಗೆ , ಗಾಜು , ಪೇಪರ್,

ಸ್ಟೀಲ್‌ನಿಂದ ತಯಾರಿಸಿದ ವಸ್ತುಗಳನ್ನು ಬಳಸುವಂತೆ ಹಾಗೂ ಕೇವಲ ಬಟ್ಟೆ ಚೀಲಗಳನ್ನು ಬಳಸುವಂತೆ ಹಾಗೂ ಪ್ಲಾಸ್ಟಿಕ್

ಚೀಲಗಳನ್ನು ಬಳಸಿದಲ್ಲಿ ದಂಡವನ್ನು ವಿಧಿಸಲಾಗುವುದು ಎಂದು ತಿಳಿವಳಿಕೆಯನ್ನು ನೀಡಲಾಯಿತು.

ಸಿದ್ದಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅವರು ನಿಯಮಿತವಾಗಿ ಜಪ್ತಿ ಮಾಡುವ ಮೂಲಕ ನಿಷೇಧಿತ ಪ್ಲಾಸ್ಟಿಕ್

ಬಳಕೆಯನ್ನು ತಡೆಗಟ್ಟಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.