ಮಂಡ್ಯ: ನಗರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಉತ್ತೇಜಿಸುವ ಮೂಲಕ ಸುಸ್ಥಿರ ಮೂಲ ಸೌಕರ್ಯಗಳ ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು ಹಾಗೂ ಪರಿಸರಸ್ನೇಹಿ ಪ್ಯಾಕೇಜಿಂಗ್ ಜತೆಗೆ ಸಾಮಗ್ರಿಗಳ ಬಳಕೆಯನ್ನು ಪ್ರೇರೆಪಿಸಲು ಜು.28ರವರೆಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಅಭಿಯಾನದಲ್ಲಿ ಸ್ವಯಂ ಸೇವಕರು, ಎನ್‌ಜಿಒ ಪಾಲ್ಗೊಂಡು ಏಕಬಳಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ವ್ಯಾಪಾರಸ್ಥರಲ್ಲಿ ಅರಿವು ಮೂಡಿಸಲಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಕನಿಷ್ಟ 20 ವಾಣಿಜ್ಯ ಅಂಗಡಿ/ಸಂಸ್ಥೆಗಳನ್ನು(ಸೂಪರ್ ಮಾರ್ಕೆಟ್‌ಗಳನ್ನು) ಹಸಿರು ಸಂಸ್ಥೆಯಾಗಿ ಘೋಷಿಸುವುದು. ಶಾಲಾ ಮತ್ತು ಕಾಲೇಜುಗಳಲ್ಲಿ ಇಕೋ-ಕ್ಲಬ್ ಮೂಲಕ ಐಇಸಿ ಚಟುವಟಿಕೆ ಆಯೋಜಿಸಲಾಗುತ್ತಿದೆ. ಅದರಂತೆ ನಗರದ ಅರ್ಕೇಶ್ವರ ಮತ್ತು ಕಾಳಿಕಾಂಬ ದೇವಸ್ಥಾನವನ್ನು ಪ್ಲಾಸ್ಟಿಕ್ ಮುಕ್ತ ಸ್ಥಳಗಳೆಂದು ಘೋಷಣೆ ಮಾಡಲಾಗುತ್ತಿದೆ. ಆಸಕ್ತರು ನಗರಸಭೆಗೆ ಸಹಕಾರ ನೀಡಿ ಪ್ಲಾಸ್ಟಿಕ್ ಮುಕ್ತ ಮಂಡ್ಯವನ್ನಾಗಿ ಮಾಡಲು ಸಹಕರಿಸಬೇಕಿದೆ. ಮಾಹಿತಿಗೆ ಮೊ.ಸಂ 9845628621 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಪೌರಾಯುಕ್ತ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.