ಜಿಲ್ಲೆ

ಅಭಿಯಾನಕ್ಕೆ ಕೈ ಜೋಡಿಸಿದ ವಧುವರ

Davangere - Desk - Ganesh M K

ಚನ್ನಗಿರಿ: ನಗರದ ಜವಳಿ ಸಮುದಾಯ ಭವನದಲ್ಲಿ ಮದುವೆಯಾದ ನೂತನ ದಂಪತಿ ‘ಪ್ಲಾಸ್ಟಿಕ್ ಮುಕ್ತ ಅಭಿಯಾನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ಲಾಸ್ಟಿಕ್ ಬಳಸದಂತೆ ಸಾರ್ವಜನಿಕರಲ್ಲಿ ಶುಕ್ರವಾರ ಜಾಗೃತಿ ಮೂಡಿಸಿದರು.

ಶಿವಮೊಗ್ಗದ ವರ ಮತ್ತು ಚನ್ನಗಿರಿ ತಾಲೂಕು ವಿ. ರಾಮೇನಹಳ್ಳಿ ಗ್ರಾಮದ ವಧು ಇಂತಹದ್ದೊಂದು ವಿಶೇಷ ಅಭಿಯಾನದಲ್ಲಿ ಪಾಲ್ಗೊಂಡು ಸಾಮಾಜಿಕ ಕಾಳಜಿ ಮೆರೆದರು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಆರೋಗ್ಯಧಿಕಾರಿ ಶಿವರುದ್ರಪ್ಪ, ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎನ್ನುವ ಜಾಗೃತ ಮನೋಭಾವ ಜನರಲ್ಲಿ ಮೂಡಿದರೆ ಮಾತ್ರ ಅದರ ಬಳಕೆ ಕಡಿಮೆಯಾಗಲು ಸಾಧ್ಯ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮತ್ತು ಮನುಷ್ಯರ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.
ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿ ಕಾನೂನು ಬಿಗಿ ಮಾಡಿದ್ದರೂ ಕೆಲ ಜನರು ಬಳಕೆ ಮಾಡುವುದನ್ನು ನಿಲ್ಲಿಸಿಲ್ಲ. ಇಲಾಖೆ ವತಿಯಿಂದ ಜಾಗೃತಿ ಹಾಗೂ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳಿಗೆ ದಾಳಿ ನಡೆಸಿ, ದಂಡ ವಿಧಿಸಿ ದೂರು ದಾಖಲಿಸಿದ್ದರೂ ಪ್ಲಾಸ್ಟಿಕ್ ಮುಕ್ತ ಆಗಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು. ಪುರಸಭೆ ವ್ಯವಸ್ಥಾಪಕ ಆರಾಧ್ಯ, ವಿಶ್ವನಾಥ್ ಮತ್ತಿತರರಿದ್ದರು.