ಜಿಲ್ಲೆ

ಛಾವಣಿಗೆ ಪ್ಲಾಸ್ಟಿಕ್ ಹೊದಿಕೆ ವಿತರಣೆ

ಲಲಾಟಾಕ್ಷ ಎಸ್

ಸುಂಟಿಕೊಪ್ಪ: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಿನ ತೋಟದಲ್ಲಿರುವ ವೃದ್ಧರಾದ ಮಾಹಿಲ ಮತ್ತು ಗಿರಿಜಾ ದಂಪತಿಗೆ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಬಿ.ಬಿ.ಭಾರತೀಶ್, ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್, ಸೋಮವಾರಪೇಟೆ ಮಂಡಲ ಒಬಿ ಸಿ ಅಧ್ಯಕ್ಷ ಪಿ.ಆರ್.ಸುನೀಲ್ ಕುಮಾರ್ ಛಾವಣಿಗೆ ಪ್ಲಾಸ್ಟಿಕ್ ಹೊದಿಕೆ ನೀಡಿದರು.


ದಂಪತಿಗೆ ಆಹಾರ ಕಿಟ್ ವಿತರಿಸಿದರು. ಶಿಥಿಲಗೊಂಡ ಮನೆ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದರು. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪದ್ಮನಾಭ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪದ್ಮನಾಭ, ಲಿಖಿತ್ ದಾಮೋದರ ಹೊಸತೋಟ, ಬೂತ್ ಅಧ್ಯಕ್ಷ ಚಿದಾನಂದ ಉಲ್ಲಾಸ್, ಸುಂಟಿಕೊಪ್ಪ ಶಕ್ತಿ ಕೇಂದ್ರ ಅಧ್ಯಕ್ಷ ಧನು ಕಾವೇರಪ್ಪ, ಕೆದಕಲ್ ಕನೀಸ್ ಇದ್ದರು.