ಜಿಲ್ಲೆ

ಪ್ಲಾಸ್ಟಿಕ್ ನಿಷೇಧದ ಅರಿವು ಕಾರ್ಯಕ್ರಮ

Mysuru - Desk - Ravikumar

ಚಾಮರಾಜನಗರ: ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಸೇವಾ ಅಭಿಯಾನದ ಅಂಗವಾಗಿ ಪುರಸಭೆಯು ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ ಎಂಬ ಕಾರ್ಯಕ್ರಮದಡಿ ಬೃಹತ್ ವಾಣಿಜ್ಯ ಉದ್ದಿಮೆದಾರರುಗಳಿಗೆ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ, ಕಸ ವಿಂಗಡಣೆ ಹಾಗೂ ಉದ್ದಿಮೆ ಪರವಾನಗಿ ನವೀಕರಣದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿತು.

ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿ ವಸಂತಕುಮಾರಿ, ಆರೋಗ್ಯ ಶಾಖೆ ಮತ್ತು ಕಂದಾಯ ಶಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.