ಜಿಲ್ಲೆ

ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ಮಿಷನ್ ಲೈಫ್ ಅವೇರ್ನೆಸ್ ಅಭಿಯಾನ

Mangaluru - Hariprasad Rai


ಮಂಗಳೂರು : ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ವತಿಯಿಂದ ಮಣೇಲ್ ಶ್ರೀನಿವಾಸ ನಾಯಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಂ) ಸಹಯೋಗದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುವ ಮಿಷನ್ ಲೈಫ್ ಅವೇರ್ನೆಸ್ ಅಭಿಯಾನ ಯಶಸ್ಸಿಯಾಗಿ ಸಮಾಪನಗೊಂಡಿತು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಯುವ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಪರಿಸರ ದಿನದಂದು (ಜೂನ್ 5)2024) ಪ್ರಾರಂಭಿಸಲಾದ ಈ ಕಾರ್ಯಕ್ರಮದಲ್ಲಿ 55 ಕಾಲೇಜುಗಳು ಮತ್ತು ಆನ್‌ಲೈನ್ ರಸಪ್ರಶ್ನೆ ಮೂಲಕ 2,800 ಪದವಿಪೂರ್ವ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಂಗಳೂರು, ಪುತ್ತೂರು, ಸುಳ್ಯ, ಬೆಳ್ತಂಗಡಿ, ಉಡುಪಿ, ಬ್ರಹ್ಮಾವರ, ಕುಂದಾಪುರ ಮತ್ತು
ಶಿರಸಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಮಾರೋಪದ ಅಂಗವಾಗಿ ನಡೆದ ಸನ್ಮಾನ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ರಸಪ್ರಶ್ನೆ, ಕೊಲಾಜ್ ಮೇಕಿಂಗ್, ಪೋಸ್ಟರ್ ಮೇಕಿಂಗ್, ಫೇಸ್ ಪೇಂಟಿಂಗ್ ಮತ್ತು ರಂಗೋಲಿ ಸ್ಪರ್ಧೆ ನಡೆಯಿತು. ಮುಖ್ಯ ಅತಿಥಿಯಾಗಿದ್ದ
ಎಂಆರ್‌ಪಿಲ್‌ನ ಮುಖ್ಯ ಜನರಲ್ ಮ್ಯಾನೇಜರ್ ಡಾ.ರುಡಾಲ್ಫ್ ವಿ.ಜೆ. ನೊರೊನ್ಹಾ ಏಕ ಬಳಕೆಯ ಪ್ಲಾಸ್ಟಿಕ್ ನಿರ್ಮುಲನೆ ಮಾಡಲು ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು ಎಂದರು.
ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ನಂದಿತಾ ಸುನಿಲ್ ಮತ್ತು ಅದಿತಿ ಕಾಮತ್ ಉಪಸ್ಥಿತರಿದ್ದರು. ಎಂಎಸ್‌ಎನ್‌ಐಎಂನ ನಿರ್ದೇಶಕಿ ಡಾ.ಮೋಲಿ ಎಸ್.ಚೌಧರಿ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಡಾ. ರೀಮಾ ಆಗ್ನೆಸ್ ಫ್ರಾಂಕ್ ಕಾರ್ಯಕ್ರಮದ ವರದಿ ಮಂಡಿಸಿದರು. ಎಂಆರ್‌ಪಿಎಲ್‌ನ ಸಹಾಯಕ ವ್ಯವಸ್ಥಾಪಕ ವಿಕ್ಟರ್ ರಾಜ್ ಮೆನೇಜಸ್ ವಂದಿಸಿದರು. ಶ್ರೇಯಾ ಮಹಾಲೆ ಕಾರ್ಯಕ್ರಮ ನಿರೂಪಿಸಿದರು.