ಹಾಲನಹಳ್ಳಿ ಹಕ್ಕೆಮಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕರ್ಮ ರೆಂಪೋಜಿ ಗಿಡ ನೆಟ್ಟು ನೀರು ಹಾಕಿದರು. ರಾಜೇಗೌಡ, ಜವರೇಗೌಡ, ಬಸವೇಗೌಡ ಇದ್ದರು.  
ಜಿಲ್ಲೆ

ಗಿಡ ನೆಟ್ಟು ಸಂರಕ್ಷಿಸುವ ಕೆಲಸವಾಗಲಿ

ಅಭಿನಯ್ ಎಚ್.ಎಂ

ಬೈಲಕುಪ್ಪೆ: ಇಕೋ ನಳಂದ ವಿದ್ಯಾ ಸಂಸ್ಥೆ ಮತ್ತು ತಾಲೂಕು ರೋಟರಿ ಮಿಡ್ ಟೌನ್ ಸಹಯೋಗದಲ್ಲಿ ಪಿರಿಯಾಪಟ್ಟಣ ತಾಲೂಕಿನ ಆಲನಹಳ್ಳಿ ಹಕ್ಕೆಮಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಬುಧವಾರ ಆಚರಿಸಲಾಯಿತು.

ಇಕೋ ನಳಂದ ವಿದ್ಯೆ ಸಂಸ್ಥೆಯ ವ್ಯವಸ್ಥಾಪಕ ಕರ್ಮ ರೆಂಪೋಜಿ ಮಾತನಾಡಿ, ಭಾರತ ಹಸಿರು ನಾಡು ಆಗಬೇಕಾದರೆ ಪ್ರತಿಯೊಬ್ಬರೂ ಗಿಡ ನೆಟ್ಟು ಸಂರಕ್ಷಿಸಬೇಕು. ಮಳೆ ಹೇರಳವಾಗಿ ಬಿದ್ದಾಗ ಪ್ರತಿಯೊಬ್ಬರೂ ಸರ್ಕಾರಿ ಜಾಗ, ಬದುಗಳಲ್ಲಿ ಗಿಡ ನೆಟ್ಟು ರಕ್ಷಿಸಿದರೆ ಮಳೆ ಬೆಳೆ ಸಮೃದ್ಧಿಯಾಗಿ ಆಗಿ ಜನರಿಗೆ ಹೇರಳವಾಗಿ ಆಮ್ಲಜನಕ ದೊರೆಯಲಿದೆ ಎಂದು ತಿಳಿಸಿದರು.

ತಾಲೂಕು ರೋಟರಿ ಮಿಡ್‌ಟೌನ್ ಅಧ್ಯಕ್ಷ ತಿರುಮಲಾಪುರದ ರಾಜೇಗೌಡ ಮಾತನಾಡಿ, ಶಾಲೆ ಆವರಣ ವಿಶಾಲವಾಗಿದ್ದು, ಸುತ್ತಲೂ ಗಿಡ ನೆಟ್ಟು ಸಂರಕ್ಷಿಸಿದರೆ ಜನರಿಗೆ ಆ ಗಿಡಗಳಿಂದ ಉತ್ತಮ ಗಾಳಿ, ಬೆಳಕು ದೊರಕುತ್ತದೆ ಎಂದರು.

ಹಿರಿಯ ವಕೀಲ ಜವರೇಗೌಡ ಮಾತನಾಡಿದರು. ರೋಟರಿ ಮಿಡ್‌ಟೌನ್ ಪ್ರಧಾನ ಕಾರ್ಯದರ್ಶಿ ಐಕೆಪಿ ಹೆಗಡೆ, ಸದಸ್ಯ ಬಸವೇಗೌಡ, ಶಾಲೆ ಮುಖ್ಯಶಿಕ್ಷಕ ವಿಜಯಕುಮಾರ್, ಅಂಗನವಾಡಿ ಶಿಕ್ಷಕಿ ಭಾಗ್ಯಾ, ಟಿಬೇಟಿಯನ್ ಮಹಿಳೆ ಯಾಕ್ ಜನ್ ಡೋಲ್ಕರ್, ರವಿ, ಶಿವರಾಜು ಹಾಜರಿದ್ದರು.