ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಹಾಗೂ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ಆಶ್ರಯದಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ 2025 ಏಕ್ ಪೇಡ್ ಮಾ ಕೆ ನಾಮ್ ಗಿಡನೆಡುವ ಸಂಕಲ್ಪ, ಹಸುರು ಪರಿಸರ ನಿರ್ಮಿಸುವ ಕಾಯಕಲ್ಪ ಕಾರ್ಯಕ್ರಮವು ನಾಲ್ಕೂರು ಮುದ್ದೂರು ಶಾಕೆಯ ಆವರಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ವಿಕ್ರಂ ಉಡುಪ ಉದ್ಘಾಟಿಸಿದರು.
ಸಂಘದ ನಿರ್ದೇಶಕ ಪ್ರತಾಪ್ ಹೆಗ್ಡೆ ಮಾರಾಳಿ ಮಾತನಾಡಿ, ಪ್ರತಿ ವರ್ಷ ಜೂನ್ ತಿಂಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಮಾಡುತ್ತೇವೆ. ಆದರೆ ಅದರ ಆರೈಕೆ ಮಾಡದೇ ಗಿಡಗಳು ಸಾಯುತ್ತವೆ. ಹಾಗಾಗಿ ಈ ಬಾರಿ ಗಿಡಗಳನ್ನು ನೆಟ್ಟು ಅದಕ್ಕೆ ಬೇಲಿ ಮಾಡುವುದು ಹಾಗೂ ಪೋಷಣೆಗೆ ಹೆಚ್ಚ ಒತ್ತು ನೀಡಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಶೋಭಾ ಕೆ.ಪೂಜಾರಿ, ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಡಿ.ಶೆಟ್ಟಿ, ಕೊಕ್ಕರ್ಣೆ ರೋಟರಿ ಕ್ಲಬ್ ಅಧ್ಯಕ್ಷ ಕಾಶೀನಾಥ ಶೆಣೈ ಕಜ್ಕೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಭಿಷೇಕ್ ಶೆಟ್ಟಿ, ನಿರ್ದೇಶಕರು, ಸಿಬ್ಬಂದಿ, ಗ್ರಾಹಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಖಾ ಮುಖ್ಯಸ್ಥ ರಜತ್ ಶೆಟ್ಟಿ ಸ್ವಾಗತಿಸಿ, ಸಂತೋಷ್ ಶೆಟ್ಟಿ ವಂದಿಸಿದರು. ಹಿರಿಯ ಕೃಷಿಕ ರಾಮ ನಾಯ್ಕ ಗಿಡ ನೆಟ್ಟು ಬೇಲಿ ನಿರ್ಮಿಸಿದರು.