ಅರಸೀಕೆರೆ ತಾಲೂಕಿನ ದೊಡ್ಡ ಮೇಟಿಕುರ್ಕೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಾಗೂ ವಿಶ್ವ ಯೋಗ ದಿನವನ್ನು ರಾಜೇಂದ್ರ ಉದ್ಘಾಟಿಸಿದರು. ಯೋಗೀಶ್, ಶಿವಮೂರ್ತಿ ಮುರುಘ, ಕೋಮಲಾ, ವೇದಾವತಿ ಇತರರು ಹಾಜರಿದ್ದರು.  
ಜಿಲ್ಲೆ

ಒಂದು ಗಿಡ ನೆಟ್ಟರೆ ಅದೇ ದೊಡ್ಡ ಕೊಡುಗೆ

ಶಿವಶಂಕರ್ ಎಂ. ಹೆಬ್ಬಳ್ಳ

ಅರಸೀಕೆರೆ ಗ್ರಾಮಾಂತರ : ಪ್ರತಿಯೊಬ್ಬ ವ್ಯಕ್ತಿಯೂ ಮುಂದಿನ ಪೀಳಿಗೆಗೆ ಏನನ್ನಾದರೂ ಉತ್ತಮ ಕೊಡುಗೆ ನೀಡಬೇಕು ಎನಿಸಿದರೆ ಒಂದು ಗಿಡ ನೆಟ್ಟು ಪೋಷಿಸಿದರೆ ಅಷ್ಟೇ ಸಾಕು ಎಂದು ದೊಡ್ಡ ಮೇಟಿಕುರ್ಕೆ ಕೆನರಾಬ್ಯಾಂಕ್ ವ್ಯವಸ್ಥಾಪಕ ರಾಜೇಂದ್ರ ಅಭಿಪ್ರಾಯಪಟ್ಟರು.

ತಾಲೂಕಿನ ಕಣಕಟ್ಟೆ ಹೋಬಳಿಯ ದೊಡ್ದ ಮೇಟಿಕುರ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ವಿಶ್ವ ಯೋಗ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಭೋಗ, ರೋಗ, ಯೋಗ, ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಮಕ್ಕಳ ವಿದ್ಯಾಭ್ಯಾಸಕ್ಕೆ ಮೊಬೈಲ್ ಮಾರಕವಾಗಿ ಪರಿಣಮಿಸುತ್ತಿದೆ. ಆದ್ದರಿಂದ ಮಕ್ಕಳು ಮೊಬೈಲ್‌ನಿಂದ ದೂರವಿರುವಂತೆ ಕಿವಿ ಮಾತು ಹೇಳಿದರು.

ಕಾಲೇಜು ಉಪನ್ಯಾಸಕ ಶಿವಮೂರ್ತಿ ಮಾತನಾಡಿ, ಮಕ್ಕಳು ಜಂಕ್ ಫುಡ್ ದಾಸರಾಗಿ ಅದರ ರುಚಿಗೆ ಜೋತು ಬಿದ್ದು ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಅವರಲ್ಲಿ ಅಪೌಷ್ಟಿಕತೆ ಹೆಚ್ಚಾಗಿ ಕಂಡು ಬರುತ್ತಿದ್ದು, ತರಗತಿಗಳಲ್ಲಿ ಮಂಕಾಗಿ ಕುಳಿತಿರುವುದರಿಂದ ಅವರಲ್ಲಿ ಲವಲವಿಕೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿ ಆರೋಗ್ಯ ಇಲಾಖೆಯ ಯೋಗೀಶ್ ಮಕ್ಕಳೊಂದಿಗೆ ಸಂವಾದ ನಡೆಸಿದರು. ಸಂಪನ್ಮೂಲ ವ್ಯಕ್ತಿ ಹಾಗೂ ಯೋಗ ಪಟು, ರಾಂಪುರ ಗ್ರಾಪಂ ಪಿಡಿಒ ವೇದಾವತಿ ವಿದ್ಯಾರ್ಥಿಗಳಿಗೆ ಯೋಗಾಸನದ ಮಹತ್ವವನ್ನು ಯೋಗ ಮಾಡುವ ಮೂಲಕ ಪ್ರಾತ್ಯಕ್ಷಿಕೆ ನೀಡಿದರು.