ಹೆಬ್ರಿ: ಪಡುಕುಡೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಔಷಧಿ ವನ, ಪರಿಸರ ಮಾಹಿತಿ, ಗಿಡ ನಾಟಿ ಕಾರ್ಯಕ್ರಮ ಮಣಿಪಾಲ ಆಯುರ್ವೇದ ಸ್ಕೂಲ್, ಹಳೇ ವಿದ್ಯಾರ್ಥಿ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಸಹಯೋಗದಲ್ಲಿ ಔಷಧೀಯ ಗಿಡಗಳನ್ನು ನೆಡಲಾಯಿತು.
ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಶ್ರೀನಿವಾಸ ಆಚಾರ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಶೆಟ್ಟಿ, ಶಂಕರ ಶೆಟ್ಟಿ, ಆಯುರ್ವೇದ ಶಾಲೆ ಶಿಕ್ಷಕ ನವೀನ್, ಒಕ್ಕೂಟ ಅಧ್ಯಕ್ಷ ಹೃದಯ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಹರೀಶ ಪೂಜಾರಿ ಗಿಡ ನಾಟಿಯಿಂದ ಶಾಲೆಗೆ ಆಗುವ ಪ್ರಯೋಜನ, ಪರಿಸರ ಸಂರಕ್ಷಣೆ ಮಾಹಿತಿ ತಿಳಿಸಿದರು. ಮೇಲ್ವಿಚಾರಕಿ ಸುಮಲತಾ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಪೂಜಾರಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಚಿತ್ರಾ ವಂದಿಸಿದರು.