ಕಡಬ: ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಬಿಜೆಪಿಯ ಪುಣ್ಚಪ್ಪಾಡಿ ಬೂತ್ 68 ಮತ್ತು ಕುಮಾರಮಂಗಲ ಬೂತ್ 69 ಆಶ್ರಯದಲ್ಲಿ ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕ ಗೌರಿಸದನ ಸಭಾಂಗಣದ ಹೊರಭಾಗದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಪನ್ಮೂಲಗಳ ವ್ಯಕ್ತಿಯಾದ ಗಿರಿಶಂಕರ ಸುಲಾಯ ಮಾತನಾಡಿದರು. ಸಮಾರಂಭ ಅಧ್ಯಕ್ಷತೆಯನ್ನು ಬಿಜೆಪಿ ಸವಣೂರು ಮಹಾ ಶಕ್ತಿಕೇಂದ್ರದ ತಾರಾನಾಥ ಕಾಯರ್ಗ ವಹಿಸಿದ್ದರು. ಸಂತೋಷ ರೈ ಕಲಾಯಿ, ಪ್ರಶಾಂತ ಗುಂಡಿಯಡ್ಕ, ವಿಜಯ, ಮೋನಪ್ಪ ನಾಯ್ಕ , ತೀರ್ಥನ್ ಬೊಳ್ಳಾಜೆ ಉಪಸ್ಥಿತರಿದ್ದರು. ಪಾಲ್ತಾಡಿ ಪುಣ್ಚಪ್ಪಾಡಿ ಶಕ್ತಿ ಕೇಂದ್ರ ಸಹ ಪ್ರಮುಖ್ ಮಹೇಶ್ ಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ರಾಜೇಶ್ವರಿ ಕನ್ಯಾಮಂಗಲ ವಂದಿಸಿದರು.