ಗದಗ ತಾಲೂಕಿನ ಹೊಂಬಳದ ಎಲ್​.ಎಸ್​.ಎಂ ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ ಲಯನ್ಸ್​ ಕ್ಲಬ್​ ಗದಗ&ಬೆಟಗೇರಿ ಹಾಗೂ ಕೆ.ವಿ. ಹಂಚಿನಾಳ ಪೌಂಡೇಶನ್​ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ದತ್ತಣ್ಣ ಬೇವಿನಕಟ್ಟಿ , ವೀರೇಶ ಹಂಚಿನಾಳ, ಪ್ರವಿಣ ವಾರಕರ, ರಾಜು ಮಲ್ಲಾಡದ, ಅಮೃತಾ ವಾರಕರ, ಸುರೇಖಾ ಮಲ್ಲಾಡದ, ಅನೀಲ ಕುಷ್ಟಗಿ, ವೀಣಾ ಸುಲಾಖೆ, ಪೂಜಾ ಪಾಟೀಲ ಹಲವರು ಇದ್ದರು. 
ಜಿಲ್ಲೆ

ಲಯನ್ಸ್​ ಕ್ಲಬ್​ದಿಂದ ಹೊಂಬಳದಲ್ಲಿ ಸಸಿ ನೆಡುವಿಕೆ

Gadag - Shivanand Hiremath

ಗದಗ: ತಾಲೂಕಿನ ಹೊಂಬಳದ ಎಲ್​. ಎಸ್​. ಎಂ. ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಲಯನ್ಸ್​ ಕ್ಲಬ್​ ಗದಗ&ಬೆಟಗೇರಿ ಹಾಗೂ ಕೆ. ವಿ.ಹಂಚಿನಾಳ ಪೌಂಡೇಶನ್​ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಲಬ್​ ಚೇರಮನ್​ ದತ್ತಣ್ಣ ಬೇವಿನಕಟ್ಟಿ ಅವರು, ಪರಿಸರ ಸಂರಣೆ ಎಂದಿಗಿಂತ ಇಂದು ಅವಶ್ಯವಿದೆ. ಕೇವಲ ಸಸಿಗಳನ್ನು ನೆಡುವುದು ಮುಖ್ಯವಲ್ಲ, ಅದು ಸಾಧನೆಯೂ ಅಲ್ಲ. ನೆಟ್ಟ ಸಸಿಗಳನ್ನು ಸಂರಸಿ ನೀರುಣಿಸುವದೂ ಅಷ್ಟೇ ಮುಖ್ಯ ಎಂದರು.
ಡಾ. ವೀರೇಶ ಹಂಚಿನಾಳ ಮಾತನಾಡಿ, ಇದೀಗ ಮಳೆಗಾಲ ಆರಂಭವಾಗಿದ್ದು ಅಲ್ಲಲ್ಲಿ ಸಸಿಗಳನ್ನು ನೆಟ್ಟು ಪರಿಸರ ಸಮತೋಲನಕ್ಕೆ ನಾವಿಂದು ಮುಂದಾಗಬೇಕಿದೆ ಎಂದರು. ಲಯನ್ಸ್​ ಕ್ಲಬ್​ ಅಧ್ಯ ರಮೇಶ ಶಿಗ್ಲಿ ಹಾಗೂ ಲಯನ್​ ಲೇಡಿ ಕ್ಲಬ್​ ಸಾವಿತ್ರಿ ಶಿಗ್ಲಿ ಅವರು ಸಂದಭೋರ್ಚಿತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕ್ಲಬ್​ ಕಾರ್ಯದಶಿರ್ ಪ್ರವಿಣ ವಾರಕರ, ಖಜಾಂಚಿ ರಾಜು ಮಲ್ಲಾಡದ, ಲಯನ್​ ಲೇಡಿ ಕ್ಲಬ್​ ಕಾರ್ಯದಶಿರ್ ಅಮೃತಾ ವಾರಕರ, ಖಜಾಂಚಿ ಸುರೇಖಾ ಮಲ್ಲಾಡದ, ಅನೀಲ ಕುಷ್ಟಗಿ, ವೀಣಾ ಸುಲಾಖೆ, ಪೂಜಾ ಪಾಟೀಲ, ಶಿಕರ ಬಳಗ, ವಿದ್ಯಾಥಿರ್ಗಳು ಸಿಬ್ಬಂದಿ ವರ್ಗದವರು ಇದ್ದರು.