ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವನದಲ್ಲಿ ಫಲವಸ್ತು ಮತ್ತು ಔಷಧೀಯ ನೆಡುವ ಕಾರ್ಯಕ್ರಮ ನಡೆಯಿತು.  
ಜಿಲ್ಲೆ

ಪಡುಕುಡೂರು ಶಾಲೆಯಲ್ಲಿ ಗಿಡ ನಾಟಿ

ಹೆಬ್ರಿ: ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಗುರು ಇಕೋ ಕ್ಲಬ್ ವತಿಯಿಂದ ಶಾಲಾವನದಲ್ಲಿ ಫಲವಸ್ತು ಮತ್ತು ಔಷಧೀಯ ಗಿಡನೆಡುವ ಕಾರ್ಯಕ್ರಮ ಸೋಮವಾರ ನಡೆಯಿತು.

ಮುಖ್ಯಶಿಕ್ಷಕ ಹರೀಶ್ ಪೂಜಾರಿ ಮಾರ್ಗದರ್ಶನದಲ್ಲಿ ಇಕೋ ಕ್ಲಬ್ ನೋಡಲ್ ಶಾಲಿನಿ ಸುಕುಮಾರ್ ಆಚಾರ್ಯ ನೇತೃತ್ವ ವಹಿಸಿದ್ದರು.

ವಿದ್ಯಾರ್ಥಿ ಧನುಷ್ ಮನೆಯಲ್ಲಿ ಬೆಳೆಸಿದ ಮುಸುಂಬಿ ಮತ್ತು ಚಿಕ್ಕು ಗಿಡ ಕೊಡುಗೆಯಾಗಿ ನೀಡಿದ್ದು, ಶಾಲಾವನದಲ್ಲಿ ನೆಡಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕಿನ ಸಮನ್ವಯಾಧಿಕಾರಿ ಚಂದ್ರಾವತಿ, ಶಿಕ್ಷಕರಾದ ಸುದರ್ಶನ್ ಶೆಟ್ಟಿ, ಶೋಭಾ ನಾಯ್ಕ, ಭಾವನಾ ನಾಯ್ಕ, ಸುಜಾತಾ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಪೂಜಾರಿ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ಅಂಗನವಾಡಿ ಕಾರ್ಯಕರ್ತೆ ಸವಿತಾ ಶೆಟ್ಟಿ, ಅಡುಗೆ ಕಾರ್ಯಕರ್ತರಾದ ಪುಷ್ಪ , ಸವಿತಾ, ಇಕೋ ಕ್ಲಬ್ ಪದಾಧಿಕಾರಿಗಳು, ಸದಸ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.