ಜಿಲ್ಲೆ

ಅಶ್ವಮೇಧ ಪಾರ್ಕನಲ್ಲಿ ವನಮಹೋತ್ಸವ

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಅಶ್ವಮೇಧ ಪಾರ್ಕ್ ನಲ್ಲಿ ಭಾನುವಾರ ನಿವಾಸಿಗಳ ಅಭಿವೃದ್ಧಿ ಸಂಘದ ವತಿಯಿಂದ ವನಮಹೋತ್ಸವ ಆಚರಿಸಲಾಯಿತು.

ಪಾಲಿಕೆ ವಲಯ ಕಚೇರಿ ಸಹಾಯಕ ಆಯುಕ್ತ ರಮೇಶ ನೂಲ್ವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ಹಸಿರು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಎಲ್ಲೆಡೆ ಗಿಡ ನೆಡುವುದು ಅಗತ್ಯ ಎಂದರು.

ಸಂಘದ ಅಧ್ಯಕ್ಷ ಈಶ್ವರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಿವಸಂಗಯ್ಯ ಪಂಚಯ್ಯನಮಠ, ಅಯ್ಯಪ್ಪಗೌಡ ಪಾಟೀಲ, ನಜೀರಅಹ್ಮದ ಕೋಲಕಾರ, ಮಹಾದೇವಪ್ಪ ಅಂಗಡಿ, ಪುಂಡಲೀಕ ಕದಂ ಇತರರು ಇದ್ದರು.