ವಿಶ್ವ ಪರಿಸರ ದಿನಾಚರಣೆ ನಿಮಿತ್ತ ದೇವದುರ್ಗ ತಾಲೂಕು ಅಮರಾಪುರ ಗ್ರಾಪಂ ಆವರಣದಲ್ಲಿ ಪಿಡಿಒ ವೆಂಕಟೇಶ ಪಾಮನಕಲ್ಲೂರು ಸಸಿ ನೆಟ್ಟರು. ಗ್ರಾಪಂ ಅಧ್ಯಕ್ಷ ಭೀಮಣ್ಣ ಬಿರಾದಾರ್, ಸಿಬ್ಬಂದಿ ಬಾಲಯ್ಯ, ಭೀಮನಗೌಡ ಇತರರಿದ್ದರು. 
ಜಿಲ್ಲೆ

ಉಷ್ಣಾಂಶ ತಗ್ಗಲು ಗಿಡಮರಗಳ ಬೆಳೆಸಿ

ಗಾಯತ್ರಿ ಮಾಲಿಪಾಟೀಲ್

ದೇವದುರ್ಗ: ಪರಿಸರ ನಾಶದಿಂದ ಪ್ರಕೃತಿಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ಸಂಭವಿಸುತ್ತವೆ. ಗಿಡಮರಗಳ ಪೋಷಣೆಯಿಂದ ಜೀವಸಂಕುಲ ಉಳಿಯಲು ಸಾಧ್ಯ ಎಂದು ಪಿಡಿಒ ವೆಂಕಟೇಶ ಪಾಮನಕಲ್ಲೂರು ಹೇಳಿದರು.

ತಾಲೂಕಿನ ಅಮರಾಪುರ ಗ್ರಾಪಂನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಿಡಮರಗಳನ್ನು ಬೆಳೆಸುವುದರಿಂದ ಉಷ್ಣತೆ ಕಡಿಮೆಯಾಗಿ ಉತ್ತಮ ಮಳೆಯಾಗಲಿದೆ. ನಗರೀಕರಣ, ಕೈಗಾರೀಕರಣದಿಂದ ಪರಿಸರ ರಕ್ಷಣೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಹಂತದಲ್ಲೇ ಪರಿಸರದ ಬಗ್ಗೆ ಅರಿವು ಮೂಡಿಸಬೇಕಿದೆ. ಎಲ್ಲರೂ ಗಿಡ ನೆಟ್ಟರೆ ಊರಿಗೆ ಒಂದು ವನ ನಿರ್ಮಾಣವಾಗಲಿದೆ. ಪರಿಸರ ದಿನ ಆಚರಣೆಗೆ ಸೀಮಿತವಾಗದೆ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದರು.

ಗ್ರಾಪಂ ಅಧ್ಯಕ್ಷ ಭೀಮಣ್ಣ ಬಿರಾದಾರ್, ಮಾಜಿ ಅಧ್ಯಕ್ಷೆ ಶಿವಕಾಂತಮ್ಮ ಆದಪ್ಪ ಮುಕ್ಕನಾಳ, ಗ್ರಂಥಪಾಲಕಿ ಅನ್ನಪೂರ್ಣ, ಸಿಬ್ಬಂದಿ ಬಾಲಯ್ಯ, ಭೀಮನಗೌಡ, ಪ್ರಾರಂಭ ಸಂಸ್ಥೆ ಸಂಚಾಲಕ ಎಂ.ರಂಗಪ್ಪ, ಪ್ರಮುಖರಾದ ಯಲ್ಲಪ್ಪ ನಿಲವಂಜಿ, ಶಿವು ತುಗಲಿ, ಬಸವ, ನರಸಪ್ಪ, ಸಾಬಣ್ಣ, ಬಸಣ್ಣ ಪೂಜಾರಿ, ಹನುಮಂತ ನಿಲವಂಜಿ ಇತರರಿದ್ದರು.