ಹಲಗೂರು ಪೋಲಿಸ್ ಠಾಣೆಯ ಎಎಸ್‌ಐ ದೇವರಾಜ್ ಹಾಗೂ ಯುವ ಮುಖಂಡರು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ಜಿಲ್ಲೆ

ಜಾಗತಿಕ ತಾಪಮಾನ ತಡೆಗೆ ಮರ ಗಿಡ ಬೆಳೆಸಿ

ಹಲಗೂರು: ಜಾಗತಿಕ ತಾಪಮಾನ ಮನುಷ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಗಿಡ ನೆಟ್ಟು ಬೆಳೆಸುವುದರಿಂದ ತಾಪಮಾನ ನಿಯಂತ್ರಿಸಬಹುದು ಎಂದು ಹಲಗೂರು ಎಸ್.ಎನ್.ಎಂಟರ್‌ಪ್ರೈಸಸ್ ಮಾಲೀಕ ಉಮೇಶ್ ತಿಳಿಸಿದರು.
78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಲಗೂರಿನ ವೀರಭದ್ರ ಸ್ವಾಮಿ ದೇವಸ್ಥಾನ, ಪಟ್ಟಲದಮ್ಮನ ದೇವಸ್ಥಾನ, ಕರ್ನಾಟಕ ಪಬ್ಲಿಕ್ ಶಾಲಾ ಆವರಣ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಡಿವೈಡರ್‌ಗಳಲ್ಲಿ ಗುರುವಾರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ತಾಪಮಾನ ಜಾಸ್ತಿಯಾಗಿ ಮನುಷ್ಯನಿಗೆ ನೀರಿನ ಅವಶ್ಯಕತೆ ಹೆಚ್ಚಿದೆ. ಪರಿಸರ ಉಳಿಸಿ ಬೆಳೆಸುವುದಕ್ಕಾಗಿ ಹಾಗೂ ಮನುಷ್ಯನ ಮೇಲೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಬರದಂತೆ ಪರಿಸರವನ್ನು ಕಾಪಾಡಿಕೊಳ್ಳಲು ಎಲ್ಲರಲ್ಲೂ ಪರಿಸರ ಪ್ರಜ್ಞೆ ಮೂಡಬೇಕು ಎಂದು ತಿಳಿಸಿದರು. ಮಾರುತಿ ಎಲೆಕ್ಟ್ರಾನಿಕ್ ಮಾಲೀಕ ಜಗದೀಶ್, ದೇವರಾಜ್, ಉಮೇಶ್, ಮೋಹನ್, ಜಗದೀಶ, ಶಿವಕುಮಾರ್, ಮಂಚೇಗೌಡ, ಶಿವಣ್ಣ, ಸತೀಶ, ಸಿದ್ದರಾಜು, ಪ್ರವೀಣ್, ಸಂತೋಷ್, ಶಿವು, ಸತೀಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.