ಕುಕನೂರು ತಾಲೂಕಿನ ಆಡೂರ ಗ್ರಾಮದ ರೈತರ ಹೆಸರು ಬೆಳೆಯನ್ನು ಕೃಷಿ ಅಧಿಕಾರಿ ಬಸವರಾಜ ತೇರಿನ ವೀಕ್ಷಣೆ ಮಾಡಿದರು. 
ಜಿಲ್ಲೆ

ಸಸ್ಯ ಸಂಸ್ಕರಣೆಗೆ ಕ್ರಮ ಅಗತ್ಯ - ಕೃಷಿ ಅಧಿಕಾರಿ ಸಲಹೆ

ಶಶಿಧರ ಎಲ್

ಕುಕನೂರು: ಬೆಳವಣಿಗೆ ಹಂತದಲ್ಲಿರುವ ಹೆಸರು ಬೆಳೆ ಹಳದಿ ಬಣ್ಣಕ್ಕೆ ತಿರುಗಿದೆ. ರೈತರು ಸಸ್ಯ ಸಂಸ್ಕರಣಾ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಅಧಿಕಾರಿ ಬಸವರಾಜ ತೇರಿನ ಸಲಹೆ ನೀಡಿದರು.

ತಾಲೂಕಿನ ಆಡೂರ ಗ್ರಾಮದ ರೈತರ ಹೊಲಗಳಲ್ಲಿ ಸೋಮವಾರ ಹೆಸರು ಬೆಳೆ ವೀಕ್ಷಣೆ ಮಾಡಿ ಮಾತನಾಡಿದರು. ಮಳೆಯಿಂದ ಬೆಳೆಗಳು ಲಘು ಪೋಷಕಾಂಶಗಳನ್ನು ಕಳೆದುಕೊಂಡಿವೆ. 5 ಎಂಎಲ್ ಪ್ರತಿ ಲೀಟರ್ ನೀರಿನೊಂದಿಗೆ ಹಾಗೂ ಕರಗುವ ಗೊಬ್ಬರವನ್ನು 4 ಗ್ರಾಂ, ಪ್ರತಿ ಲೀಟರ್ ನೀರಿನೊಂದಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು.

ಹೆಸರು, ಅಲಸಂಧಿ, ಮೆಕ್ಕೆಜೋಳಕ್ಕೆ ಬೇರು ಕೊಳೆ ರೋಗ ಕಂಡು ಬಂದಲ್ಲಿ ಕಾರ್ಬಂಡೈಜಿಂ ಶಿಲೀಂಧ್ರ ನಾಶಕವನ್ನು ಬೆಳೆಯ ಬುಡಕ್ಕೆ ಸ್ಪ್ರೇಯ್ ಮಾಡಬೇಕು ಎಂದು ತಿಳಿಸಿದರು. ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಗೂಳಪ್ಪ ಕೊಳಜಿ, ಸಿಬ್ಬಂದಿ ಪ್ರಶಾಂತ ಸಜ್ಜನ್ ರೈತರಾದ ಹುಚ್ಚಿರಪ್ಪ, ಮುತ್ತಣ್ಣ, ಬಸಪ್ಪ ಕಲ್ಲಪ್ಪ ಅಂಗಡಿ ಇದ್ದರು.