ಜಿಲ್ಲೆ

ಶುದ್ಧ ಗಾಳಿಗಾಗಿ ಸಸಿಗಳನ್ನು ನೆಟ್ಟು ಪಾಲನೆ ಮಾಡಲಿ


ಹೊಳೆನರಸೀಪುರ : ಮುಂದಿನ ದಿನಗಳಲ್ಲಿ ಉಸಿರಾಡಲು ಶುದ್ಧ ಗಾಳಿಯನ್ನು ಖರೀದಿಸುವ ಅನಿವಾರ್ಯತೆ ಎದುರಾಗಬಾರದು ಎಂದರೆ ಈಗಿನಿಂದಲೇ ಸಸಿಗಳನ್ನು ನೆಟ್ಟು, ಬೆಳಸಬೇಕು ಎಂದು ವಾಸವಿ ಕ್ಲಬ್‌ನ ಪ್ರಾಂಥಪಾಲ ವಿದ್ಯಾಸಂಕಲ್ಪ ರಾಂಗೋಪಾಲ್ ಸಲಹೆ ನೀಡಿದರು.


ವಾಸವಿ ಕ್ಲಬ್‌ನಿಂದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಕ್ಲಬ್‌ನಿಂದ ಕೋಟಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಬೇಕು ಎಂದು ಸಂಕಲ್ಪ ಮಾಡಲಾಗಿದೆ. ಇದಕ್ಕಾಗಿ ನಮ್ಮ ಸದಸ್ಯರು ಶ್ರಮಿಸುತ್ತಿದ್ದಾರೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಬೇಕಾದರೆ ನಾವು ಈಗಿನಿಂದಲೆ ಸಸಿಗಳನ್ನು ನೆಟ್ಟು, ಪಾಲನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಗುಡ್ಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ, ಸಂಗೀತ ಸಾಧಕಿ ಎಚ್.ಆರ್.ಪುಷ್ಪಲತಾ ಹಾಗೂ ತಾಲೂಕು ಪರ್ತಕರ್ತರನ್ನು ಸನ್ಮಾನಿಸಲಾಯಿತು.


ಕಾಲೇಜಿನ ಪ್ರಾಂಶುಪಾಲ ಗುರುಮೂರ್ತಿ , ಪ್ರಾಧ್ಯಾಪಕ ಮಂಜುರಾಜ್, ಕ್ಲಬ್ಬಿನ ಹಿರಿಯ ಸದಸ್ಯರಾದ ಗುರುರಾಜ್, ಸಿ.ಎನ್. ಮಂಜುನಾಥ್, ಎಸ್.ಗೋಕುಲ್, ಕಾರ್ಯದರ್ಶಿ ಹೇಮಾ ನಾಗೇಂದ್ರ, ಮಂಜುನಾಥ್ ಗುಪ್ತಾ, ಎ.ಆರ್.ರವಿಕುಮಾರ್, ಮುರಳಿಧರ ಗುಪ್ತಾ, ರವಿಕೀರ್ತಿ ಇತರರು ಇದ್ದರು.