ಬೈಲಹೊಂಗಲ: ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರಿ ಹಲವಾರು ಯೋಜನೆ ಜಾರಿಗೊಳಿಸಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಶ್ರೀ ಸಂಗಮೇಶ್ವರ ಪಿಕೆಪಿಎಸ್ ಅಧ್ಯ ನಿಂಗಪ್ಪ ಚೌಡಣ್ಣವರ ಹೇಳಿದರು.
ತಾಲೂಕಿನ ದೊಡವಾಡ ಗ್ರಾಮದ ಶ್ರೀ ಸಂಗಮೇಶ್ವರ ಪಿಕೆಪಿಎಸ್ನ ರಿಯಾಯಿತಿ ಬಡ್ಡಿ ದರದ ಟ್ರ್ಯಾಕ್ಟರ್ ಸಾಲ ಯೋಜನೆಯಡಿ ಮಂಗಳವಾರ ರೈತ ಸೋಮಲಿಂಗಪ್ಪ ಯರಿಕಿತ್ತೂರ ಅವರಿಗೆ ಹೊಸ ಟ್ರ್ಯಾಕ್ಟರ್ ವಿತರಿಸಿ ಮಾತನಾಡಿ, ಗ್ರಾಮದ ಒಟ್ಟು 38 ರೈತರಿಗೆ ಈ ಯೋಜನೆಯಡಿ ಟ್ರ್ಯಾಕ್ಟರ್ವಿತರಿಸಲಾಗಿದೆ. ರೈತರು ಕೃಷಿ ಚಟುವಟಿಕೆಗಳ ಜತೆಗೆ ಹೈನುಗಾರಿಕೆಯಂತಹ ಉಪ ಕಸಬು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬ್ಯಾಂಕ್ ಇನ್ಸ್ಪೆಕ್ಟರ್ ಎಸ್.ವಿ.ಗಣಾಚಾರಿ, ನಿರ್ದೇಶಕ ಸಂಗಮೇಶ ಅಂದಾನಶೆಟ್ಟಿ, ಸಿಇಒ ಎಂ.ಎಸ್.ಶಿಂಧೆ, ಹನಮಂತ ಸಪ್ಪಡ್ಲಿ, ಅನಂತ ಗಾಡಣ್ಣವರ, ವಿರೂಪಾ ಪಟಾತ ಇತರರಿದ್ದರು.