ಜಿಲ್ಲೆ

ಕನ್ನಡ ಕಲಿಕಾ ಕೇಂದ್ರ ವಿಸ್ತರಿಸಲು ಯೋಜನೆ

ಆರ್.ತುಳಸಿಕುಮಾರ್

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಈಗಾಗಲೇ ನಡೆಸುತ್ತಿರುವ ಕನ್ನಡ ಕಲಿಕಾ ಕೇಂದ್ರಗಳನ್ನು ಇನ್ನಷ್ಟು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ.

ಈ ಯೋಜನೆಯ ಪ್ರಕಾರ ಖಾಸಗಿ ವಲಯ, ವಸತಿ ಸಮುಚ್ಛಯ, ವೈದ್ಯಕೀಯ ಕಾಲೇಜುಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕನ್ನಡಿಗರೊಂದಿಗೆ ಸಂವಹನ ನಡೆಸಲು ಅನ್ಯ ಭಾಷಿಕರಿಗೆ ಕನ್ನಡ ಕಲಿಸಲಾಗುವುದು. ಇದಕ್ಕಾಗಿ ಸಂವಹನ ಕೇಂದ್ರಿತವಾದ ಹೊಸ ಪಠ್ಯಕ್ರಮವನ್ನು ಸಿದ್ಧಪಡಿಸಿದ್ದು, ಸಂಜೆ ಸಮಯದಲ್ಲಿ ಕನ್ನಡ ಕಲಿಸಲಾಗುತ್ತದೆ.

ಕನ್ನಡ ಕಲಿಕಾ ಕೇಂದ್ರಗಳಲ್ಲಿ ಕನ್ನಡ ಕಲಿಸಲು ಇಚ್ಛಿಸುವ ಯುವಕ/ಯುವತಿಯರು ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೊಠಡಿ ಸಂಖ್ಯೆ 263, 2ನೇ ಮಹಡಿ, ವಿಧಾನಸೌಧ, ಬೆಂಗಳೂರು- 560 001 ಅಥವಾ ತಮ್ಮ ಸ್ವ-ವಿವರವನ್ನು 15 ದಿನದೊಳಗಾಗಿ ಕಳುಹಿಸಬಹುದು. ಆಯ್ದ ಅಭ್ಯರ್ಥಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ತರಬೇತಿ ನೀಡಲಾಗುತ್ತದೆ.