ಕಂಪ್ಲಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಜೀಮ್ ಪ್ರೇಮ್‌ಜಿ ಫೌಂಡೇಷನ್ ಸಹಯೋಗದಲ್ಲಿ ಶನಿವಾರ ಲೈಫ್ ಲರ್ನಿಂಗ್ ಲಿಟ್‌ರಸಿ 3 ಎಲ್ ಸ್ಕಿಲ್ 21ನೇ ಶತಮಾನದ ಕೌಶಲಗಳು ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.\
ಪ್ರಾಚಾರ್ಯ ಬಾಲಾಜಿ ಎಂ.ಪಿ. ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿಷಯ ಜ್ಞಾನದೊಂದಿಗೆ ಸಂವಾದ ಕೌಶಲ ಅಗತ್ಯ. ಪದವಿ ಗಳಿಕೆಯೊಂದಿಗೆ ಭವಿಷ್ಯವನ್ನು ರೂಪಿಸಿಕೊಳ್ಳುವ ಯೋಜನೆಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ರೂಪಿಸಿಕೊಳ್ಳುವ ಕುರಿತು ಜಾಗೃತಿ ತೋರಬೇಕು ಎಂದರು.
ಫೌಂಡೇಷನ್ ಸಂಪನ್ಮೂಲ ವ್ಯಕ್ತಿ ಮುರಳೀಧರ, ರಾಘವೇಂದ್ರ, ನವೀನ್, ಸಂತೋಷ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾಲೇಜಿನ ಆಂತರಿಕ ಭರವಸೆ ಕೋಶದ ಸಂಚಾಲಕ ಡಾ.ಕೆ.ಮಹೇಶ, ಪ್ಲೇಸ್‌ಮೆಂಟ್ ಸೆಲ್ ಸಮಿತಿ ಸಂಯೋಜಕ ಡಾ.ಅನ್ನಪೂರ್ಣ ಗುಡದೂರು, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ಸಂಚಾಲಕ ಡಾ.ಜೆ.ಕೃಷ್ಣ, ಸಹಾಯಕ ಪ್ರಾಧ್ಯಾಪಕರಾದ ಚಂದ್ರಶೇಖರ, ಜಿ.ಎಂ.ಮಮತಾ, ಗ್ರಂಥಪಾಲಕ ಎ.ಜಿ.ವೀರಭದ್ರಪ್ಪ ಇತರರಿದ್ದರು.