ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಸಮೀಪದ ಸಮೀಪದ ರಾಜಾ ಲಖಮಗೌಡ ಉದ್ಯಾನವನದ ಚಿಟ್ಟೆ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ‘ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡುವ ಅಭಿಮಾನ’ಕ್ಕೆ ಶಾಸಕ ನಿಖಿಲ ಕತ್ತಿ ಚಾಲನೆ ನೀಡಿದರು. ಟಿ.ಆರ್.ಮಲ್ಲಾಡದ, ರಾಜಶೇಖರ ಪಾಟೀಲ, ರಮೇಶ ಛಾಯಾಗೋಳ ಇತರರಿದ್ದರು.  
ಜಿಲ್ಲೆ

ಯೋಜನೆ ಯಶಸ್ಸಿಗೆ ಅಧಿಕಾರಿಗಳು ಶ್ರಮಿಸಲಿ

ಪ್ರಶಾಂತ ಹೂಗಾರ

ಹುಕ್ಕೇರಿ: ಜನಪ್ರತಿನಿಧಿಗಳು ಕೈಗೊಳ್ಳುವ ಜನಪರ ಕಾರ್ಯಗಳು ಯಶಸ್ವಿ ಆಗಬೇಕಾದರೆ ಅಧಿಕಾರಿಗಳು ಶ್ರಮಿಸಬೇಕು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ತಾಲೂಕಿನ ಹಿಡಕಲ್ ಡ್ಯಾಮ್ ಸಮೀಪದ ರಾಜಾ ಲಖಮಗೌಡ ಉದ್ಯಾನವನದ ಚಿಟ್ಟೆ ಪಾರ್ಕ್‌ನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡುವ ಅಭಿಮಾನ’ಕ್ಕೆ ಚಾಲನೆ ನೀಡಿ ಮಾತನಾಡಿ, ದಿ.ಉಮೇಶ ಕತ್ತಿ ಅವರು ಅರಣ್ಯ ಸಚಿವರಾಗಿದ್ದಾಗ ಪ್ರಕೃತಿ ವಿಕೋಪ ತಡೆಯಲು ಅರಣ್ಯ ಸಂಪತ್ತು ಹೆಚ್ಚಿಸುವ ಸಂಕಲ್ಪದೊಂದಿಗೆ ತಾಲೂಕಿನಲ್ಲಿ ಹೆಚ್ಚು ಸಸಿ ನೆಟ್ಟಿದ್ದರು ಎಂದರು.

ಶಾಲಾ ಮಕ್ಕಳಿಗೆ ಸಸಿ ವಿತರಿಸಲಾಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ, ಸಿಪಿಐ ರಮೇಶ ಛಾಯಾಗೋಳ, ಉದ್ಯಾನವನದ ಸಹಾಯಕ ನಿರ್ದೇಶಕ ರಾಜಶೇಖರ ಪಾಟೀಲ, ಅವಿನಾಶ ಹೊಳೆಪ್ಪಗೋಳ ಇತರರು ಇದ್ದರು.