ಜಿಲ್ಲೆ

ಕಣಬರ್ಗಿ ಚೆಕ್ ಪೋಸ್ಟ್ ನಲ್ಲಿ 2ಲಕ್ಷ ರೂ.ನಗದು ವಶಕ್ಕೆ

ಮಂಜುನಾಥ ಕೋಳಿಗುಡ್ಡ


ಬೆಳಗಾವಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ನಗದು ಸಾಗಾಣಿಕೆ ಮೇಲೆ ತೀವ್ರ ‌ನಿಗಾ ವಹಿಸಿರುವ ಚುನಾವಣೆ ಅಧಿಕಾರಿಗಳು  ದಾಖಲೆ ಇಲ್ಲದ 2ಲಕ್ಷ ರೂ.‌ನಗದು ಹಣವನ್ನು  ಸೋಮವಾರ ಕಣಬರ್ಗಿ ಚಕ್ ಪೋಸ್ಟ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಸೊಲ್ಲಾಪುರ ಜಿಲ್ಲೆಯ ಮಂಗಳವಾಡ ಗ್ರಾಮದ ಮಚ್ಚೇಂದ್ರ ಅವರು‌ ಮುಚ್ಚಂಡಿಯಿಂದ  2ಲಕ್ಷ ರೂ.
ಯಾವುದೇ ದಾಖಲೆಗಳಿಲ್ಲದೇ ಅಕ್ರಮವಾಗಿ ಸಾಗಿಸುತ್ತಿರುವ ಸಂದರ್ಭದಲ್ಲಿ  ಚೆಕ್ ಪೋಸ್ಟ್ ಸಿಬ್ಬಂದಿ ಹಣ  ಜಪ್ತಮಾಡಿಕೊಂಡಿದ್ದಾರೆ.