ಅಥಣಿ ಗ್ರಾಮೀಣ: ಶಾಸಕ ಲಕ್ಷ್ಮಣ ಸವದಿ ಸಹಕಾರದಿಂದ ಅಥಣಿ ತಾಲೂಕಿನಲ್ಲಿರುವ ಎಲ್ಲ ಸಹಕಾರ ಸಂಘಗಳು ಬೆಳವಣಿಗೆ ಹೊಂದಿ ರೈತರ ಆಶಾಕಿರಣಗಳಾಗಿವೆ ಎಂದು ಕಾಂಗ್ರೆಸ್ ಮುಖಂಡ ಶಿವು ಗುಡ್ಡಾಪುರ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ವಿವಿಧೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿ, ರೈತರ ಸಮಸ್ಯೆ ಅರಿತು ಸಾಲ ಮರುಪಾವತಿ ವೇಳೆ ಶಾಸಕ ಲಕ್ಷ್ಮಣ ಸವದಿ ಪ್ರತಿವರ್ಷ ಅಸಲು ಭರ್ತಿಮಾಡುತ್ತಾರೆ. ಇದರಿಂದ ಪ್ರತಿಯೊಬ್ಬ ರೈತರಿಗೂ ಅನುಕೂಲವಾಗಿ, ಸಹಕಾರ ಸಂಘಗಳು ಲಾಭ ಹೊಂದುತ್ತಿವೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಮಲ್ಲಿಕಾರ್ಜುನ ಗುಡ್ಡಾಪುರ ವರದಿ ಓದಿ, ಸಂಘ 1,669 ಸದಸ್ಯರನ್ನು ಹೊಂದಿದೆ. 10.43 ಕೋಟಿ ರೂ. ಸಾಲ ವಿತರಿಸಲಾಗಿದ್ದು, ಪ್ರಸಕ್ತ ವರ್ಷ 4.54 ಲಕ್ಷ ರೂ. ಲಾಭಗಳಿಸಿದೆ ಎಂದರು.
ಸಂಘದ ಅಧ್ಯಕ್ಷ ಘಟಿವಾಳಪ್ಪ ಗುಡ್ಡಾಪುರ, ಉಪಾಧ್ಯಕ್ಷ ಬಾಳಪ್ಪ ಮಾಂಗ, ಸದಾಶಿವ ಸವದಿ, ಅಡಿವೆಪ್ಪ ಕೆಂಚಣ್ಣವರ, ಶಂಭುಲಿಂಗ ಕೇರಿ, ಈರಪ್ಪ ಖೋತ, ಈರಗೌಡ ಪಾಟೀಲ, ಭೀಮು ಗುಡ್ಡಾಪುರ, ಪ್ರಶಾಂತ ಮಿರ್ಜಿ, ಸಂಗಪ್ಪ ಶಿರಗಿರಿ, ಗುರಪ್ಪ ತಾಂವಶಿ, ಶ್ರೀಮಂತ ಪೂಜಾರಿ, ಚಿದಾನಂದ ಮಠಪತಿ, ಶಿವನಿಂಗ ಸನದಿ, ಅಪ್ಪಾಸಾಬ ಸಿಂಧೂರ, ಭೀಮು ಕೇರಿ ಇತರರಿದ್ದರು. ಬಸಪ್ಪ ಚಿಕ್ಕಟ್ಟಿ ನಿರೂಪಿಸಿದರು. ಸುರೇಶ ಹಿಪ್ಪರಗಿ ವಂದಿಸಿದರು.