ಉಡುಪಿ: ರೌಡಿಶೀಟರ್ ಪಿಟ್ಟಿ ನಾಗೇಶ್ ಕುಕ್ಕಿಕಟ್ಟೆ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಮುನ್ನ ಯಾನೆ ರಿಚಾರ್ಡ್ ಮಸ್ಕರೇನಸ್ ಗರಡಿಮಜಲು, ಗುರು ಪ್ರಸಾದ್ ಶೆಟ್ಟಿ ಅಲೆವೂರು, ವಿಶ್ವ ಯಾನೆ ವಿಶ್ವನಾಥ ಕೊರಂಗ್ರಪಾಡಿ, ಸಂತೋಷ್ ಬೈಲೂರು, ಝಾಕೀರ್ ಹುಸೇನ್ ಕುಕ್ಕಿಕಟ್ಟೆ ಖುಲಾಸೆಗೊಂಡವರು. ಐವರು ಆರೋಪಿಗಳೂ ಈ ಮೊದಲೇ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ.
ಜಿಲ್ಲಾ ನ್ಯಾಯಾಧೀಶ ಶಾಂತವೀರ ಶಿವಪ್ಪ ಮಂಗಳವಾರ ತೀರ್ಪು ಪ್ರಕಟಿಸಿದ್ದು, ಪೂರಕ ಸಾಕ್ಷಾೃಧಾರಗಳ ಕೊರತೆಯಿಂದ ಪ್ರಾಸಿಕ್ಯೂಶನ್ ಆರೋಪ ಸಾಬೀತುಪಡಿಸಲು ವಿಫಲವಾದ ಹಿನ್ನಲೆಯಲ್ಲಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.
ಉದ್ಯಾವರದ ಹಲೀಮಾ ಸಾಬ್ಜು ಸಭಾಂಗಣದ ಮುಂಭಾಗ ಸೆ.11, 2014 ರಂದು ಪಿಟ್ಟಿ ನಾಗೇಶ್ ಕೊಲೆ ನಡೆದಿತ್ತು. ನ್ಯಾಯಾಲಯದಲ್ಲಿ ಸುಮಾರು 71 ಸಾಕ್ಷಿಗಳನ್ನು ಹಾಜರುಪಡಿಸಲಾಗಿದ್ದು, 18 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಅರೋಪಿಗಳ ಪರ ಹಿರಿಯ ವಕೀಲ ಶಾಂತರಾಮ್ ಶೆಟ್ಟಿ ವಾದಿಸಿದ್ದರು.