ಕುಶಾಲನಗರ:
ಕರ್ಕಾಟಕ ಅಮವಾಸ್ಯೆ ಹಿನ್ನೆಲೆಯಲ್ಲಿ ಪಿತೃ ತರ್ಪಣ, ಪಿತೃ ದೋಷ ಪರಿಹಾರಕ್ಕಾಗಿ ವಿವಿಧ ಧಾರ್ಮಿಕ ವಿದಿ ವಿಧಾನಗಳು ಹಾಗೂ ಸಾಮೂಹಿಕ ಪಿಂಡ ಪದಾನ ಕಾರ್ಯಕ್ರಮ ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದ ಕಾವೇರಿ ನದಿಯ ತಟದಲ್ಲಿ ಗುರುವಾರ ಏರ್ಪಡಿಸಲಾಗಿತ್ತು.
ಕುಶಾಲನಗರ ಮತ್ತು ಸುತ್ತಮುತ್ತಲಿನ ಭಾಗಗಳಿಂದ ಅಧಿಕ ಮಂದಿ ಈ ಪಿತೃ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪುರೋಹಿತ ರಾಮಣ್ಣ ಶಾಂತಿ ಮಾರ್ಗದರ್ಶನದಲ್ಲಿ ವಿದಿ ವಿಧಾನಗಳನ್ನು ನಡೆಸಲಾಯಿತು. ಧಾರ್ಮಿಕ ಆಚರಣೆಗಳ ಪ್ರಕಾರ ಪಿತೃ ದೇವತೆಗಳಿಗೆ ಪಿತೃ ತರ್ಪಣ ನಡೆಯಿತು. ಕುಶಾಲನಗರ ಹಿಂದು ಮಲೆಯಾಳಿ ಸಮಾಜ, ಎಸ್.ಎನ್.ಡಿ.ಪಿ. ಕುಶಾಲನಗರ ಶಾಖೆ, ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ಹಾಗೂ ಕೇರಳ ಸಮಾಜದ ಸದಸ್ಯರ ಮೇಲ್ವಿಚಾರಣೆಯಲ್ಲಿ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಿತು. ಕಾರ್ಯಕ್ರಮದ ನಂತರ ಸ್ವಯಂ ಸೇವಕರು ಕಾವೇರಿ ನದಿ ತೀರದಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡರು.