ಜಿಲ್ಲೆ

ಕೋಲಾರದಲ್ಲಿ ಪಿಟ್ ವೈಪರ್ ರಕ್ಷಣೆ

ಅಳಿವಿನಂಚಿನಲ್ಲಿರುವ ಅತಿ ವಿಷಕಾರಿಹಾವು

ಕೋಲಾರ: ದಟ್ಟ ಹಸಿರು ಕಾಡುಗಳಲ್ಲಿ ಕಂಡುಬರುವ ಅತಿವಿಷಯುಕ್ತ ಹಸಿರು ಬಣ್ಣದ ಪಿಟ್ ವೈಪರ್ (ಹಾವು) ಕೋಲಾರದಲ್ಲಿ ಕಂಡುಬಂದಿದ್ದು, ಉರಗ ಸಂರಕ್ಷಕ ನಾಗರಾಜ್ ರಕ್ಷಣೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ನಗರದ ಜಯನಗರ ರಸ್ತೆಯ ಮನೆಯೊಂದರಲ್ಲಿ ಕಾಣಿಸಿಕೊಂಡ ಪಿಟ್ ವೈಪರ್ ಅಥವಾ ಬಂಬೂ ಪಿಟ್ ವೈಪರ್ ಎಂದು ಕರೆಯಲ್ಪಡುವ ಹಸಿರು ಹಾವು ಹೆಚ್ಚಾಗಿ ಈಶಾನ್ಯ ಪ್ರದೇಶಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ, ಪಶ್ಚಿಮ ಘಟ್ಟಗಳು ಸೇರಿ ಮಹಾರಾಷ್ಟ್ರದ ಕೆಲವು ದೊಡ್ಡ ಕಾಡುಗಳಲ್ಲಿ ಕಂಡುಬರುತ್ತದೆ.

ಬಂಬೂ ಪಿಟ್ ವೈಪರ್ ತುಂಬಾ ವಿಷಕಾರಿಯಾಗಿದ್ದು, ತೀವ್ರ ಹಿಮೋಟಾಕ್ಸಿಕ್ ವಿಷವನ್ನು ಹೊಂದಿದೆ. ಜಂಬೂ ವೈಪರ್ ನಮ್ಮಲ್ಲಿ ಕಾಣಿಸಿಕೊಂಡಿದ್ದು ಆಶ್ಚರ್ಯ ಮೂಡಿಸಿದೆ ಎಂದು ನಾಗರಾಜ್ ತಿಳಿಸಿದ್ದಾರೆ.