_upscale _blur _autotone 
ಜಿಲ್ಲೆ

ಪಿರಿಯಾಪಟ್ಟಣ ಪಿಎಲ್‌ಡಿ ಬ್ಯಾಂಕ್‌ಗೆ ಅವಿರೋಧ ಆಯ್ಕೆ

ಎ. ಆರ್. ರಘುರಾಮ

ಪಿರಿಯಾಪಟ್ಟಣ: ತಾಲೂಕಿನ ಪ್ರಾಥಮಿಕ ಕೃಷಿ ಭೂ ಅಭಿವೃದ್ಧಿ (ಪಿಎಲ್ಡಿ) ಬ್ಯಾಂಕ್ ಅಧ್ಯಕ್ಷರಾಗಿ ಕೆ.ಹೊಲದಪ್ಪ ಮತ್ತು ಉಪಾಧ್ಯಕ್ಷರಾಗಿ ಮಮತಾ ಅವಿರೋಧ ಆಯ್ಕೆಯಾಗಿದ್ದಾರೆ. 14 ನಿರ್ದೇಶಕ ಸ್ಥಾನ ಹೊಂದಿರುವ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಭಾನುವಾರ ಚುನಾವಣೆ ನಿಗದಿಯಾಗಿತ್ತು. ಕೆ.ಹೊಲದಪ್ಪ ಮತ್ತು ಮಮತಾ ಹೊರತಾಗಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾ ಅಧಿಕಾರಿ ಅನಸೂಯಾ ಘೋಷಣೆ ಮಾಡಿದರು. ಪಿಎಲ್ಡಿ ಬ್ಯಾಂಕ್‌ಗೆ ಸತತವಾಗಿ 3ನೇ ಬಾರಿಗೆ ಕಾಂಗ್ರೆಸ್ ಬೆಂಬಲಿತರಿಗೆ ಅಧಿಕಾರ ದೊರೆತ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಅಧ್ಯಕ್ಷ ಕೆ.ಹೊಲದಪ್ಪ ಮಾತನಾಡಿ, ಬ್ಯಾಂಕ್ ಅಭಿವೃದ್ಧಿಗಾಗಿ ಹಿರಿಯರ ಮತ್ತು ನಿರ್ದೇಶಕರ ಮಾರ್ಗದರ್ಶನ, ಸಲಹೆ, ಸಹಕಾರ ಪಡೆಯುವೆ. ರೈತರ ಪರವಾಗಿ ಕೆಲಸ ಮಾಡುವೆ ಎಂದರು. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ ಮಾತನಾಡಿ, ನೂತನ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ನಿರ್ದೇಶಕರು ಅಧಿಕಾರದ ಅವಧಿಯಲ್ಲಿ ರೈತರ ಪ್ರಗತಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದರು. ನಿರ್ದೇಶಕರಾದ ಎಚ್.ಜಿ.ಪರಮೇಶ, ಶಿವಣ್ಣ, ನೀಲಮ್ಮ, ಸುರೇಶ, ರಾಜಣ್ಣ, ಪ್ರಮೀಳಾ, ರೋಹಿಣಿ, ಬಿ.ರವಿ, ಕೆ.ಪಿ ಮಂಜುನಾಥ, ನಿಕಟ ಪೂರ್ವ ಅಧ್ಯಕ್ಷ ಲೋಕೇಶ, ಪುರಸಭೆ ಸದಸ್ಯ ರಾಜೇಶ್, ಮುಖಂಡರಾದ ಟಿ.ಡಿ.ನಾಗರಾಜ್, ಕಲ್ಯಾಣಪ್ಪ, ಪುಟ್ಟರಾಜು, ಸಿದ್ದೇಗೌಡ, ಶಿವಶಂಕರ ಮತ್ತಿತರರು ಹಾಜರಿದ್ದರು.