ಜಮಖಂಡಿ: ನಗರದ ಹೊರಲವಯದ ಕೇಂದ್ರ ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿಗಳನ್ನು ಕಾರ್ಮಿಕರಂತೆ ಬಳಸಿಕೊಂಡಿರುವುದಕ್ಕೆ ಸಾರ್ವಜನಿಕರು ಆಕ್ಷೇಪಿಸಿದ್ದಾರೆ.
ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ಬದಿಯಲ್ಲಿ ಕೇಂದ್ರ ಕಾರಾಗೃಹಕ್ಕೆ ನೀರು ಸರಬರಾಜು ಆಗುವ ಪೈಪ್‌ಲೈನ್ ಒಡೆದು ಹೋಗಿದ್ದನ್ನು ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿಗಳಿಂದ ದುರಸ್ತಿ ಮಾಡಿಸಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೇಲಿಂದ ಮೇಲೆ ಪೈಪ್‌ಲೈನ್ ಒಡೆದು ಹಾಳಾಗುತ್ತಿತ್ತು. ಕಾರಾಗೃಹದಲ್ಲಿ ನೀರಿನ ತೊಂದರೆ ಉಂಟಾಗಿತ್ತು. ಸಿಬ್ಬಂದಿ ರಕ್ಷಣೆಯಲ್ಲೇ ಕರೆದುಕೊಂಡು ಹೋಗಿ ದುರಸ್ತಿ ಮಾಡಿಸಲಾಗಿದೆ ಎಂದು ಕಾರಾಗೃಹ ಅಧೀಕ್ಷಕ ವಿ.ಡಿ.ಕುಂಬಾರ ತಿಳಿಸಿದ್ದಾರೆ.