ಜಿಲ್ಲೆ

ಪಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ ಹಾರಾಡಿದ ಕೇಸರಿ ಧ್ವಜ - ಅರುಣ್ ಪುತ್ತಿಲ ಭೇಟಿ : ರಕ್ಷಾಬಂಧನ ಆಚರಿಸಿ ಮೂವರಿಗೆ ಅಭಿನಂದನೆ

Mangaluru - Nishantha Narayana

ಪುತ್ತೂರು: ಹಲವು ವರ್ಷಗಳ ನಂತರ ಪುತ್ತೂರಿನ ಪಿಲೋಮಿನಾ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಕೇಸರಿ ಧ್ವಜ ಹಾರಾಡಿದೆ.

ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಮೂವರು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೂವರು ಗೆಲುವು ಸಾಧಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿಪಿನ್ ಗೌಡ ಗೆಲುವು ಸಾಧಿಸಿದ್ದಾರೆ, NSUI ನ ಮಹಮ್ಮದ್ ಫರ್ವಿಝ್ ಗೆ ಸೋಲಾಗಿದೆ.

ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಮೃದ್ಧಿ ಶೆಣೈ ಗೆಲುವು ಸಾಧಿಸಿದರೆ , NSUI ನ ಮಹಮ್ಮದ್ ಅಕ್ತಾರ್ ಗೆ ಸೋಲಾಗಿದೆ. ಜೊತೆ ಕಾರ್ಯದರ್ಶಿ ರಕ್ಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಪಿಲೋಮಿನಾ ಕಾಲೇಜ ಬಳಿ ಭೇಟಿ ನೀಡಿ ಗೆಲುವು ಸಾಧಿಸಿದ ಮೂವರು ವಿದ್ಯಾರ್ಥಿಗಳಿಗೆ ಅಭಿನಂದಿಸಿ ರಕ್ಷಾಬಂಧನ ಆಚರಿಸಿದರು.