ಜಿಲ್ಲೆ

ಪಿಲಿಪಂಜ ಸಿನಿಮಾದ ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯ



ಮಂಗಳೂರು : ಎಸ್‌ಬಿ ಅರ್ಪಿಸುವ, ಶಿಯಾನ ಪ್ರೊಡಕ್ಸನ್ ಹೌಸ್‌ನ ವಿಭಿನ್ನ ಶೈಲಿಯ ‘ಪಿಲಿಪಂಜ’ ತುಳು ಸಿನಿಮಾದ ಪ್ರಥಮ ಹಂತದ
ಚಿತ್ರೀಕರಣ ಪೂರ್ಣಗೊಂಡಿದೆ. ಪ್ರತೀಕ್ ಪೂಜಾರಿ ನಿರ್ಮಾಣದ, ಯುವ ನಿರ್ದೇಶಕ ಭರತ ಶೆಟ್ಟಿ ನಿರ್ದೇಶನದ ಈ ಸಿನಿಮಾ ವಿಭಿನ್ನ ಕಥಾ ಹಂದರ ಹೊಂದಿದೆ.
ಮುಡಿಪು, ಹೂಹಾಕುವ ಕಲ್ಲು, ವರ್ಕಾಡಿ, ನರಿಂಗಾನ, ಇರಾ ಮುಂತಾದ ಕಡೆ ಸತತ 25 ದಿನಗಳ ಚಿತ್ರೀಕರಣ ನಡೆದಿದೆ. ತುಳು ಚಿತ್ರ ರಂಗದಲ್ಲಿ ಹೊಸ ಪ್ರಯೋಗದೊಂದಿಗೆ ವಿಭಿನ್ನವಾಗಿ ಸಿನಿಮಾ ಮೂಡಿ ಬರಲಿದೆ. ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಪ್ರವೀಣ್ ಕೊಡಕ್ಕಲ್, ಶಿವಪ್ರಕಾಶ್ ಪೂಂಜ, ಪ್ರಕಾಶ್ ಶೆಟ್ಟಿ ಧರ್ಮನಗರ,
ಪ್ರತೀಕ್ ಪೂಜಾರಿ, ರಕ್ಷಣ್ ಮಾಡೂರು, ರೂಪಶ್ರೀ ವರ್ಕಾಡಿ, ಜಯಶೀಲ ಮಂಗಳೂರು, ವಿಜಯಹರಿ ರೈ, ದಯಾನಂದ ರೈ ಬೆಟ್ಟಂಪಾಡಿ, ರಂಜನ್ ಬೋಳೂರು, ಹೊಸ ಪರಿಚಯ ದಿಶಾರಾಣಿ, ಭಾಸ್ಕರ್ ಮಣಿಪಾಲ ಮುಂತಾದವರು ನಟಿಸಿದ್ದಾರೆ.
ಛಾಯಾಗ್ರಹಣ ಉದಯ ಬಳ್ಳಾಲ್, ಸಂಗೀತ ಲಾಯ್ ವೆಲಂಟೈನ್ ಸಲ್ದಾನ, ಸಂಕಲನ ಶ್ರೀನಾಥ್ ಪವಾರ್, ಸಾಹಸ ಸುರೇಶ್ ಶೆಟ್ಟಿ, ಸಹ ನಿರ್ದೇಶನ ಅಕ್ಷತ್ ವಿಟ್ಲ, ಸಜೇಶ್ ಪೂಜಾರಿ, ಚಿತ್ರಕಥೆ, ಸಂಭಾಷಣೆ ಸುರೇಶ್ ಬಲ್ಮಠ, ಪ್ರಚಾರ ಬಾಳ ಜಗನ್ನಾಥ ಶೆಟ್ಟಿ. ಶೀಘ್ರದಲ್ಲಿ ದ್ವಿತೀಯ ಹಂತದ ಚಿತ್ರೀಕರಣವನ್ನು ಮುಗಿಸಿ 2025ರಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ.