ಜಿಲ್ಲೆ

ಪಿಲಿಕುಳ ಕಂಬಳದ ಕರೆ ಮುಹೂರ್ತ

Mangaluru - Hariprasad Rai


ಮಂಗಳೂರು : ಹಲವು ವರ್ಷಗಳ ಬಳಿಕ ಪಿಲಿಕುಳ ನಿಸರ್ಗಧಾಮದಲ್ಲಿ ಕಂಬಳ ನಡೆಯಲಿದ್ದು,ಬುಧವಾರ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಮೇಯರ್ ಸುಧೀರ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಕಂಬಳ ಕರೆಗೆ ಮುಹೂರ್ತ ಕಾರ್ಯಕ್ರಮ ನಡೆಯಿತು.
ಪಿಲಿಕುಳದಲ್ಲಿ ಕಂಬಳ ನಡೆಸಲು ನವೆಂಬರ್ ಎರಡನೇ ವಾರದಲ್ಲಿ ಕಂಬಳ ಸಮಿತಿಯು ದಿನ ನಿಗದಿ ಮಾಡಿದೆ. ಈ ಸಂದರ್ಭದಲ್ಲಿ ತುಳು ಉತ್ಸವ ಸೇರಿದಂತೆ ಇತರ ಆಕರ್ಷಣೀಯ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಈ ಸಂದರ್ಭ ತಿಳಿಸಿದರು.
ದ.ಕ.ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್, ಪಿಲಿಕುಳ ನಿಸರ್ಗಧಾಮದ ಕಾರ್ಯಕಾರಿ ನಿರ್ದೇಶಕಿ ನೂರ್ ಜಹಾನ್, ಕಂಬಳ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಡಾ. ಮೋಹನ್ ಆಳ್ವ, ಮಿಥುನ್ ರೈ ಉಪಸ್ಥಿತರಿದ್ದರು.