ಕೆ.ಆರ್.ಸಾಗರ: ವಿಶ್ವವಿಖ್ಯಾತ ಕೃಷ್ಣರಾಜಸಾಗರದ ಬೃಂದಾವನಕ್ಕೆ ಶನಿವಾರ ಬಂದ ದೇಶ-ವಿದೇಶದ ಪ್ರವಾಸಿಗರನ್ನು ಕಸದ ರಾಶಿ ಸ್ವಾಗತಿಸಿತು.
ಪ್ರವೇಶ ದ್ವಾರದ ಮುಂಭಾಗದಲ್ಲಿದ್ದ ಕಸದ ರಾಶಿ ಹಾಗೂ ಅದರಿಂದ ಬರುತ್ತಿದ್ದ ಗಬ್ಬು ವಾಸನೆ ಕಂಡ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.
ಪ್ರವೇಶ ದ್ವಾರದ ಸ್ಕೂಟರ್ ಪಾರ್ಕಿಂಗ್ ಬಳಿಯ ಕಸದ ತೊಟ್ಟಿಯಿಂದ ಪ್ರತಿ ಎರಡು, ಮೂರು ದಿನಗಳಿಗೊಮ್ಮೆ ವಿಲೇವಾರಿ ಮಾಡಲಾಗುತ್ತದೆ. ಆದರೆ, ಆಯುಧ ಪೂಜಾ ಹಾಗೂ ವಿಜಯದಶಮಿ ಹಬ್ಬದಿಂದ ರಸ್ತೆ ಬದಿ ವ್ಯಾಪಾರಿಗಳು ಹೆಚ್ಚಿನ ಕಸವನ್ನು ತಂದು ಹಾಕಿದ್ದರು. ರಸ್ತೆ ಬದಿ ತಿಂಡಿ-ತಿನಿಸು ಹಾಗೂ ಇತರ ತಾಜ್ಯಗಳ ರಾಶಿ ತಂದು ಹಾಕಿದ ಪರಿಣಾಮ ದುರ್ವಾಸನೆ ಬರುತ್ತಿತ್ತು.