ಕಂಕಣವಾಡಿ ಪಟ್ಟಣದಲ್ಲಿ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಕಂಕಣವಾಡಿ ಶಾಖೆಯ ಪಿಗ್ಮಿ ಸಂಗ್ರಹಕಾರರಿಗೆ ಶಾಖೆ ಅಧ್ಯಕ್ಷ ರಾಜಶೇಖರ ಖನದಾಳೆ ಧನ ಸಹಾಯ ನೀಡಿದರು. ಅಪ್ಪಾಸಾಬ ಬ್ಯಾಕೂಡೆ, ಶ್ರೀಶೈಲ ಮೂಡಲಗಿ, ಮಹಾಲಿಂಗ ಮುದ್ದಾಪುರ ಇತರರಿದ್ದರು. 
ಜಿಲ್ಲೆ

ಪಿಗ್ಮಿ ಸಂಗ್ರಹಕಾರರಿಗೆ ಧನಸಹಾಯ

ರಾಯಬಾಗ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಿಗ್ಮಿ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಫಿಗ್ಮಿ ಸಂಗ್ರಹಕಾರ ಕುಟುಂಬಗಳಿಗೆ ಸೊಸೈಟಿ ಸಂಸ್ಥಾಪಕ ಡಾ. ಪ್ರಭಾಕರ ಕೋರೆ ಅವರ ನಿರ್ದೇಶನದಂತೆ ಧನ ಸಹಾಯ ಮಾಡಲಾಗುತ್ತಿದೆ ಎಂದು ಶಾಖೆ ಅಧ್ಯಕ್ಷ
ರಾಜಶೇಖರ ಖನದಾಳೆ ಹೇಳಿದರು.

ಶನಿವಾರ ಕಂಕಣವಾಡಿಯಲ್ಲಿ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಕಂಕಣವಾಡಿ ಶಾಖೆಯ ಪಿಗ್ಮಿ ಸಂಗ್ರಹಕಾರರಿಗೆ ದಿನಸಿ ಖರೀದಿಗಾಗಿ ಧನ ಸಹಾಯ ನೀಡಿ ಮಾತನಾಡಿದರು. ಶಾಖೆ ಉಪಾಧ್ಯಕ್ಷ ಅಪ್ಪಾಸಾಬ ಬ್ಯಾಕೂಡೆ, ನಿರ್ದೇಶಕರಾದ ಶ್ರೀಶೈಲ ಮೂಡಲಗಿ, ಮಹಾಲಿಂಗ ಮುದ್ದಾಪುರ, ನಿಂಗಪ್ಪ ಪಕಾಂಡಿ, ಹಾಲಪ್ಪ ಪಿರಗಿಪಾಟೀಲ, ಅಪ್ಪಣ್ಣ ಗಡ್ಕರಿ, ಬಸಪ್ಪ ಮುಗಳಿ, ಮಹಾಂತೇಶ ಬೆನ್ನಾಳಿ, ಭರತೇಶ ಪಾಟೀಲ ಹಾಗೂ ಶಾಖೆ ವ್ಯವಸ್ಥಾಪಕ ಭರಮು ಪೂಜಾರಿ ಹಾಗೂ ಸಿಬ್ಬಂದಿ ಇದ್ದರು.