ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಇದೊಂದು ಅಲೆಮಾರಿ ನಟೋರಿಸ್ ತಂಡ, ಮನೆ.ಮಠವಿಲ್ಲ, ಹಣಕ್ಕಾಗಿ ಏನನ್ನೂ ಮಾಡಲೂ ಸಿದ್ದ, ರಾಬರಿ ಡಕಾಯಿತಿಗೆ ರಾಜ್ಯದ ಯಾವ ಮೂಲೆಯಾದರೂ ಸರಿ, ಎದುರಿಗೆ ಯಾರೇ ಇದ್ದರೂ ಸರಿ ಕೇರ್ ಮಾಡಲ್ಲ, ಮಾರಕಾಸಗಳೊಂದಿಗೆ ಕಾರ್ಯಾಚರಣೆಗಿಳಿದರೆ ಬೇಟೆ ಗ್ಯಾರಂಟಿ.
ದುಷ್ಟಕೂಟದ ಚಲನಚಿತ್ರವೊಂದನ್ನು ನಿರ್ಮಿಸಬಹುದಾದಷ್ಟು ಹಿನ್ನೆಲೆಯೊಂದಿರುವ ಗ್ಯಾಂಗ್‌ವೊಂದು ಇದೀಗ ಜೈಲಿನ ಕಂಬಿ ಎಣಿಸುತ್ತಿದೆ. ಇವರೇ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಹಂದಿಗಳ ಸರಣಿ ಕಳವು ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ ಸದಸ್ಯರು.
ದೊಡ್ಡಬಳ್ಳಾಪುರ ತಾಲೂಕಿನ ಸುತ್ತಮುತ್ತಲಿನ ಹಂದಿಗಳನ್ನು ಕಳವು ಮಾಡುತ್ತಿದ್ದ ಅಂಬರೀಶ, ಶೇಖಪ್ಪ ಮತ್ತು ಯಲ್ಲಪ್ಪ ಎಂಬ ಆರೋಪಿಗಳನ್ನು ಇತ್ತೀಚಿಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು, ಇವರ ತನಿಖೆ ವೇಳೆ ಹೊರಬಿದ್ದ ಇವರ ಕ್ರಿಮಿನಲ್ ಹಿನ್ನೆಲೆ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಉತ್ತರ ಕರ್ನಾಟಕ ರಾಯಚೂರು ಮೂಲದ ದುಷ್ಕರ್ಮಿಗಳ ಮೇಲೆ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ, ರಾಬರಿ, ಡಕಾಯಿತಿ ಮಾರಣಾಂತಿಕ ಹಲ್ಲೆ ಮತ್ತಿತರ ಹತ್ತಿಪ್ಪತ್ತು ಕೇಸ್‌ಗಳು ದಾಖಲಾಗಿವೆ.
ಬೇಲ್ ಇವರಿಗೆ ಕಾಮನ್: ಕಳವು, ರಾಬರಿ, ಡಕಾಯಿತಿ ಕೇಸ್‌ಗಳಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರುವ ದುಷ್ಕರ್ಮಿಗಳು ಕೆಲವೇ ದಿನಗಳಲ್ಲಿ ಬೇಲ್ ಪಡೆದು ಹೊರಬಂದು ಮತ್ತೆ ದುಷ್ಕೃತ್ಯ ಮುಂದುವರೆಸುತ್ತಾರೆ. ಇದರಲ್ಲಿ ಪ್ರಮುಖ ಆರೋಪಿ ಅಂಬರೀಶ ಅಲಿಯಾಸ್ ಬುಲ್ ಅಂಬರೀಶ ಎಂಬುವನ ಮೇಲೆ ಬರೋಬ್ಬರಿ 23 ಕೇಸ್‌ಗಳಿವೆ. ಹಲವು ಬಾರಿ ಜೈಲು ಕಂಡಿರುವ ಈ ತಂಡಕ್ಕೆ ಈ ಬಾರಿ ದೊಡ್ಡಬಳ್ಳಾಪುರ ಸೇರಿ ವಿವಿಧ ಜಿಲ್ಲೆಯ ಠಾಣೆಗಳಲ್ಲಿ ಹಾಕಿರುವ ಕೇಸ್‌ಗಳಿಗೆ ತಕ್ಷಣಕ್ಕೆ ಬೇಲ್ ಸಿಗಲ್ಲ ಎಂಬುದು ಪೊಲೀಸರ ನಿರೀಕ್ಷೆಯಾಗಿದೆ.
ಒಬ್ಬನ ಮೇಲೆ ೈರಿಂಗ್: ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಪ್ರಮುಖ ಆರೋಪಿ ಅಂಬರೀಶ್ ಎಂಬುವನ ಕಾಲಿಗೆ ಬಳ್ಳಾರಿ ಪೊಲೀಸರು ಗುಂಡು ಹಾರಿಸಿದ್ದರು. ಗುಂಡು ತಗಲಿದ ಜಾಗ ಚಿಕಿತ್ಸೆ ಬಳಿಕವೂ ಗುಣವಾಗದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ವೈದ್ಯರು ಕಾಲನ್ನು ಕತ್ತರಿಸಿ ತೆಗೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೊಲೆರೋ ಟ್ರಾವೆಲ್: ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಬೊಲೆರೋ ವಾಹನ ಕಳವು ಮಾಡಿದ್ದ ಗ್ಯಾಂಗ್ ನಂಬರ್‌ಪ್ಲೇಟ್ ಬದಲಿಸಿ ಊರೂರು ಸುತ್ತುತ್ತ ಸಿಕ್ಕ ಕಡೆಗಳಲ್ಲಿ ರಾಬರಿ ಮಾಡುವುದು, ಡಕಾಯಿತಿ ಮತ್ತಿತರ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದರು. ಸಿಕ್ಕ ದುಡ್ಡನ್ನು ದೋಚಿಕೊಂಡು ಮೋಜು ಮಸ್ತಿ ಮಾಡುತ್ತಿದ್ದರು. ಇದೇ ಬೊಲೆರೋ ವಾಹನವೇ ಇವರೆಲ್ಲ ದುಷ್ಕೃತ್ಯಗಳಿಗೆ ಮೂಕಸಾಕ್ಷಿಯಾಗಿತ್ತು ಎನ್ನಲಾಗಿದೆ.
ಕ್ಯಾಮರಾ ದೃಶ್ಯಗಳಿಂದ ಪತ್ತೆ: ದುಷ್ಕರ್ಮಿಗಳ ತಂಡ ಪತ್ತೆಗಾಗಿ ದೊಡ್ಡಬಳ್ಳಾಪುರ ಪೊಲೀಸರು ವಿಶೇಷ ತಂಡ ರಚಿಸಿ ಹಲವು ಕಡೆ ಹುಡುಕಾಟ ನಡೆಸಿತ್ತು. ಇದೇ ವೇಳೆ ಬಳ್ಳಾರಿ ವ್ಯಾಪ್ತಿಯಲ್ಲಿ ಓರ್ವ ಹಾಗೂ ಕನಕಪುರದ ಕಗ್ಗಲಿಪುರ ಠಾಣೆಯಲ್ಲಿ ಮತ್ತೊರ್ವ ಸಿಕ್ಕಿ ಬಿದ್ದಿದ್ದ. ತಾಲೂಕು ವ್ಯಾಪ್ತಿಯಲ್ಲಿನ ಹಂದಿಕಳ್ಳತನ ತನಿಖೆಯಲ್ಲಿದ್ದ ದೊಡ್ಡಬಳ್ಳಾಪುರ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಗಳೊಂದಿಗೆ ಇವೆರಡು ಠಾಣೆಯಲ್ಲಿ ಸಿಕ್ಕಿಬಿದ್ದ ಆರೋಪಿಗಳ ಪೊಟೋಗಳೊಂದಿಗೆ ಹೋಲಿಕೆ ಮಾಡಿದಾಗ ತಾಲೂಕು ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಹಂದಿ ಕಳವು ಪ್ರಕರಣದ ದುಷ್ಕರ್ಮಿಗಳು ಎಂಬುದು ಖಚಿತವಾಗಿತ್ತು.
ಈ ಗ್ಯಾಂಗ್‌ನ ಹಿನ್ನೆಲೆಯೇ ನಟೋರಿಯಸ್ ಆಗಿದೆ, ಅಲೆಮಾರಿಗಳಾಗಿದ್ದು ಸಿಕ್ಕ ಸಿಕ್ಕಕಡೆ ದರೋಡೆ, ರಾಬರಿ, ಕಳವು ಮಾಡುವುದೇ ಇವರ ವೃತ್ತಿ. ಸಿಕ್ಕಿ ಬಿದ್ದು ಜೈಲಿಗೆ ಹೋದರೆ ಬೇಲ್ ಪಡೆದು ಮತ್ತೆ ದುಷ್ಕೃತ್ಯ ಮುಂದುವರೆಸುತ್ತಿದ್ದರು. ಈಗಾಗಲೇ ಇವರ ಮೇಲೆ ಸಾಕಷ್ಟು ಪ್ರಕರಣಗಳಿವೆ, ಈ ಬಾರಿ ಗ್ರಾಮಾಂತರ ಠಾಣೆ ಸೇರಿ ವಿವಿಧ ಠಾಣೆಗಳಲ್ಲಿ ಹಲವು ಕೇಸ್‌ಗಳು ದಾಖಲಾಗಿದ್ದು ಸುಲಭವಾಗಿ ಬೇಲ್ ಸಿಗುವುದಿಲ್ಲ ತಕ್ಕ ಶಿಕ್ಷೆಯಾಗಲಿದೆ.
ಸಾದಿಕ್‌ಪಾಷಾ, ಇನ್‌ಸ್ೆಕ್ಟರ್ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ