ಜಿಲ್ಲೆ

ಹೊಸ ರೈಲ್ವೆ ಯೋಜನೆಗಳಿಗಾಗಿ ನಿಯೋಗ

ಗಂಗಾವತಿ: ಕ್ಷೇತ್ರಗಳ ನಿರೀಕ್ಷಿತ ಅಭಿವೃದ್ಧಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಮೇಲೆ ಅವಲಂಬಿತವಾಗಿದೆ ಎಂದು ಯಲಬುರ್ಗಾ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಭಾನಾಪುರ ಹೇಳಿದರು.

ನಗರದ ಔಷಧೀಯ ಭವನದಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಬಳಕೆ ವಿರೋಧಿ ಅಭಿಯಾನದಲ್ಲಿ ಮಾತನಾಡಿದರು. ಜಿಲ್ಲೆಯ ರೈಲ್ವೆ ಮಾರ್ಗ, ರಾಜ್ಯ ಹೆದ್ದಾರಿ ಅಭಿವೃದ್ಧಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚೇಂಬರ್ ಆ್ ಕಾಮರ್ಸ್ ಪ್ರಯತ್ನಿಸುತ್ತಿದೆ. ಇದೇ ಯತ್ನವನ್ನು ಜನಪ್ರತಿನಿಧಿಗಳು ಮುಂದುವರಿಸಿದರೆ ಕಾಲಮಿತಿಯೊಳಗೆ ಎಲ್ಲ ಯೋಜನೆಗಳನ್ನು ಪಡೆಯಬಹುದಾಗಿದೆ. ಗಂಗಾವತಿ, ದರೋಜಿ, ಬಾಗಲಕೋಟೆ ಹೊಸ ರೈಲ್ವೆ ಯೋಜನೆ ಸಾಕಾರಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ಮೂಲಕ ಸಿಎಂ ಸಿದ್ದರಾಮಯ್ಯರ ಅವರ ಬಳಿ ನಿಯೋಗ ತೆರಳೋಣ ಎಂದರು.

ರೈಲ್ವೆ ಯೋಜನೆ, ಹೆದ್ದಾರಿ ನಿರ್ಮಾಣ ಸೇರಿ ವಿವಿಧ ವಿಷಯಗಳ ಬಗ್ಗೆ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಅಶೋಕಸ್ವಾಮಿ ಹೇರೂರು ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಲಿಂಗಾರೆಡ್ಡಿ ವಿ.ಆಲೂರು, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ದೊಡ್ಡಪ್ಪ ದೇಸಾಯಿ, ನಾಗಲಿಂಗಪ್ಪ ಪತ್ತಾರ್, ಪತ್ರಕರ್ತರಾದ ವಿ.ಎಸ್.ಪಾಟೀಲ್, ಚಂದ್ರಶೇಖರ್ ಮುಕ್ಕುಂದಿ, ಶರಣಬಸವ ಹುಲಿಹೈದರ್ ಮತ್ತು ಯಲಬುರ್ಗಾ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಭಾನಾಪುರನ್ನು ಸನ್ಮಾನಿಸಲಾಯಿತು.

ನಗರಸಭೆ ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ, ವಕೀಲೆ ಸಂಧ್ಯಾಹೇರೂರು, ಸಂಘದ ಪದಾಧಿಕಾರಿಗಳಾದ ಚಂದ್ರಶೇಖರಯ್ಯ ಹೇರೂರ, ವೀರಣ್ಣ ಕಾರಂಜಿ, ಅಮರೇಶ ಅರಳಿ, ಮಂಜುನಾಥ ಸುಳೇಕಲ್ ಇತರರಿದ್ದರು.